ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಆಕೆಯ ದೇಹದ ಅಂಗಾಂಗಳನ್ನು ಪ್ರೆಷರ್ ಕುಕ್ಕರ್ ನಲ್ಲಿ ಕಿರಾತಕಿ ಪತಿ ಬೇಯಿಸಿದ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ದೇಶದ ಪ್ರಮುಖ ಸಂಸ್ಥೆಯಾದ ರಕ್ಷಣಾ ಸಂಶೋಧನಾ ಮತ್ತು ಅಭಿಭಿವೃದ್ಧಿ ಸಂಘಟನೆ (ಡಿಆರ್ ಡಿಒ)ಯಲ್ಲಿ ಸೆಕ್ಯೂರಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಾಜಿ ಸೈನಿಕ ಗುರುಮೂರ್ತಿ (45) ಈ ಕೃತ್ಯ ಎಸಗಿದ್ದಾನೆ. ವೆಂಕಟ ಮಾಧವಿ (35) ಕೊಲೆಯಾದ ದುರ್ದೈವಿ.
ಜನವರಿ 16ರಿಂದ ಮಾಧವಿ ನಾಪತ್ತೆಯಾಗಿದ್ದು, ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪತಿಯ ಮೇಲೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಘಾತಕಾರಿ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಆರೋಪಿ ಪತಿ ಗುರುಮೂರ್ತಿ, ಬಾತ್ ರೂಮ್ ನಲ್ಲಿ ಪತ್ನಿಯ ದೇಹವನ್ನು ಕತ್ತರಿಸಿ ಕೆಲವು ದೇಹದ ಭಾಗಗಳನ್ನು ಪ್ರೆಷರ್ ಕುಕ್ಕರ್ ನಲ್ಲಿ ಹಾಕಿ ಬೇಯಿಸಿದೆ. ಇದೇ ರೀತಿ ಮಾಂಸವನ್ನು ಹಲವಾರು ಬಾರಿ ಬೇಯಿಸಿದ ನಂತರ ಮಾಂಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕೆರೆಯಲ್ಲಿ ಬಿಸಾಡಿದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ದಂಪತಿ ನಡುವೆ ಪದೇಪದೆ ಜಗಳ ಆಗುತ್ತಿದ್ದು, ಯಾವ ಉದ್ದೇಶದಿಂದ ಈ ರೀತಿ ಕ್ರೂರವಾಗಿ ಕೊಲೆ ಮಾಡಿದ್ದಾನೆ ಎಂಬ ವಿಷಯ ಇನ್ನೂ ತಿಳಿದು ಬಂದಿಲ್ಲ. ಹೈದರಾಬಾದ್ ಪೊಲೀಸರು ಆರೋಪಿ ವಿಚಾರಣೆ ಮುಂದುವರಿಸಿದ್ದಾರೆ.