ಚಾಕು ಹಿಡಿದು ಬೆದರಿಸಿದ ಗೆಳೆಯನನ್ನು ಗರ್ಭಿಣಿಯಾಗಿದ್ದ 16 ವರ್ಷದ ಗೆಳತಿ ಕತ್ತು ಸೀಳಿ ಕೊಂದ ಆಘಾತಕಾರಿ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.
ರಾಯ್ ಪುರದ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ ನಲ್ಲಿ ಪತ್ತೆಯಾದ ಯುವಕನ ಶವದ ತನಿಖೆ ನಡೆಸಿದ ಪೊಲೀಸರು 16 ವರ್ಷದ ಅಪ್ರಾಪ್ತ ಯುವತಿಯನ್ನು ಬಂಧಿಸಿದ್ದಾರೆ.
ಬಾಲಿಸ್ ಪುರದ ಕೊನಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ 16 ವರ್ಷದ ಬಾಲಕಿ ಸೆಪ್ಟೆಂಬರ್ 18ರಂದು ಬಾಯ್ ಫ್ರೆಂಡ್ ಮೊಹಮದ್ ಸದ್ದಾಂನನ್ನು ಭೇಟಿ ಮಾಡಲು ರಾಯ್ ಪುರಕ್ಕೆ ತೆರಳಿದ್ದಳು.
ಬಿಹಾರ ಮೂಲದ ಮೊಹಮದ್ ಸದ್ದಾಂ ಅದಾಂಪುರ್ ನಲ್ಲಿ ಎಂಎಸ್ ಇಂಜಿನಿಯರ್ ಕೆಲಸ ಮಾಡಿಕೊಂಡಿದ್ದು, ರಾಯ್ ಪುರದ ಸಕಾರ್ ಗಲಿಯಲ್ಲಿ ಲಾಡ್ಜ್ ಮಾಡಿದ್ದ. ಕೆಲವು ದಿನಗಳ ಕಾಲ ಇಬ್ಬರೂ ತಂಗಿದ್ದರು.
ಗರ್ಭಿಣಿಯಾದ ಗೆಳತಿಗೆ ಅಬಾರ್ಷನ್ ಮಾಡಿಸಿಕೊಳ್ಳಲು ಸದ್ದಾಂ ಒತ್ತಡ ಹೇರಿದ್ದ. ಈ ವಿಷಯದ ಮೇಲೆ ಗಲಾಟೆ ವಿಕೋಪಕ್ಕೆ ತಿರುಗಿ ಲಾಡ್ಜ್ ಮುಂಭಾಗದಲ್ಲಿ ನಡೆದ ಜಗಳದಲ್ಲಿ ಚಾಕು ಇರಿಯುವುದಾಗಿ ಬೆದರಿಕೆ ಹಾಕಿದ್ದ.
ಸೆ.28ರಂದು ಸದ್ದಾಂ ಮಲಗಿದ್ದಾಗ ತನಗೆ ಬೆದರಿಕೆ ಹಾಕಿದ್ದ ಚಾಕುವಿನಿಂದಲೇ ಕತ್ತು ಸೀಳಿ ಕೊಲೆ ಮಾಡಿ ಬಾಲಕಿ ಸೇಡು ತೀರಿಸಿಕೊಂಡಿದ್ದಾಳೆ. ನಂತರ ಬಾಗಿಲು ಹಾಕಿಕೊಂಡು ಸದ್ದಾಂ ಮೊಬೈಲ್ ತೆಗೆದುಕೊಂಡು ಹೋಗಿದ್ದಾಳೆ. ಕೊಠಡಿಯ ಕೀಯನ್ನು ರೈಲ್ವೆ ನಿಲ್ದಾಣ ಬಳಿ ಎಸೆದಿದ್ದಾಳೆ.
ಮನೆಗೆ ಮರಳಿದ ಮಗಳು ತಾಯಿಯ ಬಳಿ ಎಲ್ಲಾ ವಿಷಯ ಹೇಳಿಕೊಂಡು ಕಣ್ಣೀರು ಹಾಕಿದ್ದಾಳೆ. ಆಘಾತಕ್ಕೆ ಒಳಗಾದ ತಾಯಿ ಕೂಡಲೇ ಕೊನಾ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸದ್ದಾಂ ಮೃತಪಟ್ಟಿದ್ದ.
ಅಪ್ರಾಪ್ತೆ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಸದ್ದಾಂ ಒತ್ತಾಯಿಸಿದ್ದ. ಈ ವಿಷಯದಲ್ಲಿ ಪದೇಪದೆ ಇಬ್ಬರ ನಡುವೆ ಜಗಳ ಆಗುತ್ತಿದ್ದು, ಗರ್ಭಪಾತ ನಂತರ ಮದುವೆ ಆಗುವುದಾಗಿ ಹೇಳಿದ್ದ ಎಂದು ಹೇಳಲಾಗಿದೆ.


