ನವದೆಹಲಿ:ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಗುರುವಾರ ನಗರದ ಐತಿಹಾಸಿಕ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಚರ್ಚ್‌ಗೆ ತೆರಳಿ ಕ್ರಿಸ್ಮಸ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರು ಪ್ರತಿಯೊಬ್ಬರ ಬಾಳಿಗೂ ಕ್ರಿಸ್‌ಮಸ್ ಶಾಂತಿ, ಸಮಾಧಾನ ಮತ್ತು ಭರವಸೆಯನ್ನು ತರಲಿ. ಏಸುಕ್ರಿಸ್ತ ಅವರ ಜೀವನದ ಪಾಠ ಸಾಮರಸ್ಯ ತರಲಿʼʼ ಎಂದು ಹಾರೈಸಿದ್ದಾರೆ.
ರಾಷ್ಟ್ರಪತಿ ಭವನಕ್ಕೆ ಬಹಳ ಹತ್ತಿರದಲ್ಲಿರುವ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ತುತಿಗೀತೆಗಳು ಮೊಳಗಿದವು. ದೆಹಲಿಯ ಬಿಷಪ್ ಡಾ. ಪಾಲ್ ಸ್ವರೂಪ್ ಪ್ರಧಾನ ಮಂತ್ರಿಯವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್‌ಮಸ್ ಹೊಸ ಭರವಸೆ ಹಾಗೂ ಎಲ್ಲರಲ್ಲಿ ದಯಾಪರತೆ ಮೂಡಿಸಲಿ. ದಯೆಗೆ ಹಂಚಿಕೆಯ ಬದ್ಧತೆಯನ್ನು ತರಲಿ ಎಂದು ಅವರು ಹರಸಿದರು.
ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌ನಲ್ಲಿ ಭಾಗವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್‌್ಸ ಸಂದೇಶದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.ದೇಶಾ ದ್ಯಂತ ಇಂದು ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಅತ್ಯಂತ ಹಳೆಯ ಮತ್ತು ಭವ್ಯವಾದ ಚರ್ಚ್‌ಗಳಲ್ಲಿ ಒಂದಾದ ಕ್ಯಾಥೆಡ್ರಲ್ ಚರ್ಚ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿಯವರ ಈ ಭೇಟಿ ಧಾರ್ಮಿಕ ಸಾಮರಸ್ಯದ ಸಂದೇಶ ಮಾತ್ರವಲ್ಲದೆ, ರಾಜಧಾನಿ ದೆಹಲಿಯ ಈ ಐತಿಹಾಸಿಕ ಚರ್ಚ್ ಅನ್ನು ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಿದೆ.
ಭವ್ಯವಾದ ಚರ್ಚ್
ರಾಷ್ಟ್ರಪತಿ ಭವನಕ್ಕೆ ತೀರ ಹತ್ತಿರದಲ್ಲಿರುವ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ ದೆಹಲಿಯ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದ್ದು, ಇದನ್ನು ರಾಜಧಾನಿಯ ಅತಿದೊಡ್ಡ ಚರ್ಚ್ ಎಂದೂ ಪರಿಗಣಿಸಲಾಗಿದೆ. ಇದರ ಬೃಹತ್ ಕಟ್ಟಡ, ಎತ್ತರದ ಗುಮ್ಮಟಗಳು ಮತ್ತು ಸುಂದರವಾದ ಬಣ್ಣದ ಗಾಜು ಇದಕ್ಕೆ ವಿಶಿಷ್ಟ ಗುರುತನ್ನು ನೀಡುತ್ತದೆ.
ಇಲ್ಲಿ ಕ್ರಿಸ್‌ಮಸ್ ಸಮಯದಲ್ಲಿ ವಿಶೇಷ ಅಲಂಕಾರಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಇದರ ಭವ್ಯ ರಚನೆ ಮತ್ತು ಪ್ರಶಾಂತ ವಾತಾವರಣವು ಪ್ರವಾಸಿಗರು ಮತ್ತು ಯಾತ್ರಿಕರಲ್ಲಿ ಅತ್ಯಂತ ಜನಪ್ರಿಯವಾಗಿದೆ.
ಚರ್ಚ್ ಇತಿಹಾಸ:
ದೆಹಲಿಯ ಮುಖ್ಯ ಕ್ಯಾಥೆಡ್ರಲ್ ಚರ್ಚ್, ಇದನ್ನು ವೈಸ್ರಾಯ್ ಚರ್ಚ್ ಎಂದೂ ಕರೆಯುತ್ತಾರೆ, ಇದರ ನಿರ್ಮಾಣವು 1927 ರಲ್ಲಿ ಪ್ರಾರಂಭವಾಯಿತು ಮತ್ತು 1935 ರಲ್ಲಿ ಪೂರ್ಣಗೊಂಡಿತು ಮತ್ತು ಜನವರಿ 18, 1931 ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಇದನ್ನು ರೋಮನ್ ಕ್ಯಾಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವೆಂದು ಪರಿಗಣಿಸಲಾಗಿದೆ.


