ನವದೆಹಲಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರೈ, ವಿಜಯ್ ದೇವರಕೊಂಡ ಮತ್ತು ನಟಿ ಲಕ್ಷಿ ಮಂಚು ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ.
ಅಧಿಕಾರಿಗಳ ಪ್ರಕಾರ, ಈ ನಟ-ನಟಿಯರು ಅಕ್ರಮ ಬೆಟ್ಟಿಂಗ್ ಆ್ಯಪ್‌ಪ್‌ಗಳನ್ನು ಪ್ರಚಾರ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ನಾಲ್ವರು ಕಲಾವಿದರಿಗೆ ಪ್ರತ್ಯೇಕ ದಿನಾಂಕಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ರಾಣಾ ದಗ್ಗುಬಾಟಿ ಅವರಿಗೆ ಜುಲೈ ೨೩ರಂದು, ಪ್ರಕಾಶ್ ರಾಜ್ ಅವರಿಗೆ ಜುಲೈ 30ರಂದು, ವಿಜಯ್ ದೇವರಕೊಂಡ ಅವರಿಗೆ ಆಗಸ್ಟ್ 6ರಂದು ಮತ್ತು ಲಕ್ಷಿ ಮಂಚು ಅವರಿಗೆ ಆಗಸ್ಟ್ 13ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ.
ಈ ಪ್ರಕರಣದಲ್ಲಿ ಹೆಸರಿಸಿರುವ ಇತರ ವ್ಯಕ್ತಿಗಳಿಗೂ ಹಂತಹAತವಾಗಿ ಸಮನ್ಸ್ ನೀಡಲಾಗುವುದು ಎಂದು ಇಆ ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ
ಈ ಪ್ರಕರಣವು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರಕ್ಕೆ ಈ ಆ್ಯಪ್‌ಗಳು ಕಾನೂನುಬಾಹಿರ ಜೂಜಾಟದ ಚಟುವಟಿಕೆಗಳಿಗೆ ಸಂಬAಧಿಸಿವೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಈ ಆ್ಯಪ್‌ಗಳು ಕೋಟ್ಯಂತರ ರೂಪಾಯಿಗಳ ಅಕ್ರಮ ಹಣವನ್ನು ಗಳಿಸಿವೆ ಎಂಬ ಆರೋಪವಿದೆ. ತೆಲಂಗಾಣದ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಉದ್ಯಮಿಯೊಬ್ಬರು ದೂರು ಸಲ್ಲಿಸಿದ್ದರು.
ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು ಸಾಮಾಜಿಕ ಮಾಧ್ಯಮದ ಮೂಲಕ ಅಕ್ರಮ ಬೆಟ್ಟಿಂಗ್ ಆ್ಯಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಇಆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.
ಸಮನ್ಸ್ ಪಡೆದವರ ಪಟ್ಟಿ
ಇಡಿ ದಾಖಲಿಸಿರುವ ಕೇಸ್ ಮಾಹಿತಿ ವರದಿಯಲ್ಲಿ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಲಕ್ಷಿ÷್ಮ ಮಂಚು ಜೊತೆಗೆ ಕನ್ನಡ ನಟಿ ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಟಿವಿ ನಿರೂಪಕಿ ಶ್ರೀಮುಖಿ, ಶ್ಯಾಮಲಾ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಭಯ್ಯಾ ಸನ್ನಿ ಯಾದವ್, ಟೇಸ್ಟಿ ತೇಜಾ, ರೀತು ಚೌಧರಿ ಸೇರಿದಂತೆ ಒಟ್ಟು 29 ಸೆಲೆಬ್ರಿಟಿಗಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಯೂಟ್ಯೂಬರ್‌ಗಳ ಹೆಸರನ್ನು ಸೇರಿಸಲಾಗಿದೆ.
ಈ ನಟರು ‘ಜಂಗ್ಲೀ ರಮ್ಮಿ’, ‘ಎ23’, ‘ಜೀಟ್‌ವಿನ್’, ‘ಪ್ಯಾರಿಮ್ಯಾಚ್’, ‘ಲೋಟಸ್ 365’ ನಂತಹ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇಡಿ ಪ್ರಕಾರ, ಈ ವ್ಯಕ್ತಿಗಳು ಈ ಆ್ಯಯಪ್‌ಗಳನ್ನು ಪ್ರಚಾರ ಮಾಡಲು ಗಣನೀಯ ಪ್ರಮಾಣದ ಹಣವನ್ನು ಪಡೆದಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಹಲವು ಹೊಸ ಸಂಗತಿಗಳು ಹೊರಬರುವ ಸಾಧ್ಯತೆ ಇದೆ.


