ಗಡ್ಡ ಬೋಳಿಸಿಕೊಳ್ಳಲು ನಿರಾಕರಿಸಿದ ಗಂಡನನ್ನು ಬಿಟ್ಟು ಮುಖದ ಮೇಲೆ ಕೂದಲು ಇಲ್ಲದ ಭಾಮೈದ ಜೊತೆ ಓಡಿ ಹೋಗಿದ್ದೂ ಅಲ್ಲದೇ ಇದೀಗ ಆತನ ಜೊತೆನೇ ಬಾಳುವೆ ಎಂದು ಪಟ್ಟು ಹಿಡಿದಿದ್ದಾಳೆ ಎಂದು ಪತಿ ವಿಚಿತ್ರ ಆರೋಪ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಘಟನೆ ನಡೆದಿದ್ದು, ಪತಿ ಮಾಡಿದ ಆರೋಪವನ್ನು ತಿರಸ್ಕರಿಸಿರುವ ಪತ್ನಿ, ಗಂಡ ಲೈಂಗಿಕವಾಗಿ ದುರ್ಬಲಾಗಿದ್ದು, ಈ ಕಾರಣಕ್ಕಾಗಿ ಆತನ ತಮ್ಮನ ಜೊತೆ ಜೀವನ ನಡೆಸಲು ತೀರ್ಮಾನಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಪ್ರಕರಣ ಪೊಲೀಸ್ ಮೆಟ್ಟಿಲೇರಿದ್ದು, ತನಿಖೆ ನಡೆಸಲಾಗುತ್ತಿದೆ.
7 ತಿಂಗಳ ಹಿಂದೆ ಮೊಹಮದ್ ಸಾಗಿರ್ ಮತ್ತು ಆರ್ಶಿ ದಾಂಪತ್ಯಕ್ಕೆ ಕಾಲಿರಿಸಿದ್ದರು. ಆದರೆ ದಾಂಪತ್ಯ ಜೀವನ ಆರಂಭಿಸುವ ಮುನ್ನವೇ ಮೊಹಮದ್ ಸಾಗಿರ್ ಗೆ ತಾನು ಬೆಳೆಸಿದ ಗಡ್ಡವೇ ಮುಳುವಾಗುತ್ತದೆ ಎಂಬ ಅರಿವು ಇರಲಿಲ್ಲ.
ಮದುವೆ ಆದ ಕೆಲವು ದಿನಗಳ ನಂತರ ಆರ್ಶಿ ಗಡ್ಡ ಬೊಳಿಸಿಕೊಂಡು ನೀಟಾಗಿ ಕಾಣುವಂತೆ ಒತ್ತಡ ಹೇರಲು ಆರಂಭಿಸಿದಳು. ಆದರೆ ಗಡ್ಡದ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ಸಾಗಿರ್ ಗಡ್ಡ ತೆಗೆಯಲು ನಿರಾಕರಿಸಿದ. ಪದೇ ಪದೆ ಗಡ್ಡದ ವಿಷಯದಲ್ಲಿ ದಂಪತಿ ನಡುವೆ ಜಗಳ ಉಂಟಾಗುತ್ತಿತ್ತು.
ಸದಾ ಗಡ್ಡ ಬೋಳಿಸಿಕೊಂಡು ಕ್ಲೀನಾಗಿ ಇರುತ್ತಿದ್ದ ಗಂಡನ ತಮ್ಮ ಅಂದರೆ ಭಾಮೈದನ ಮೇಲೆ ಆಸಕ್ತಿ ಬೆಳೆಸಿಕೊಂಡ ಆರ್ಶಿ ಸಲುಗೆ ಬೆಳೆಸಿಕೊಳ್ಳಲು ಆರಂಭಿಸಿದಳು. ಇಬ್ಬರು ಹತ್ತಿರ ಆಗುತ್ತಿದ್ಧಂತೆ ಕಳೆದ ಫೆಬ್ರವರಿಯಲ್ಲಿ ಆರ್ಶಿ ಹಾಗೂ ಭಾಮೈದ ಶಬೀರ್ ಮನೆ ತೋರಿದು ಹೋಗಿದ್ದರು.
ನನ್ನ ತಮ್ಮನ ಜೊತೆ ಪತ್ನಿ ಪ್ರೇಮದ ಕುರಿತು ಮಾತನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದೆ. ಅವರಿಬ್ಬರು ಸೇರಿ ನನಗೆ ಊಟದಲ್ಲಿ ವಿಷ ಹಾಕಬಹುದು ಎಂದು ಹೆದರಿದ್ದೆ. ಹಿರಿಯರ ಒತ್ತಡಕ್ಕೆ ಮಣಿದು ನಾನು ಮದುವೆ ಆಗಿದ್ದೆ ಎಂದು ದೂರಿನಲ್ಲಿ ಸಾಗರ್ ಆರೋಪಿಸಿದ್ದ.
ಸಾಗಿರ್ ಪತ್ನಿಗಾಗಿ ಮೂರು ತಿಂಗಳ ಕಾಲ ಹುಡುಕಾಟ ನಡೆಸಿ ಕೊನೆಗೆ ಯಾವುದೇ ಫಲ ದೊರೆಯದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ಶಬೀರ್ ಜೊತೆ ಮನೆಗೆ ಮರಳಿದ ಆರ್ಶಿ, ಯಾವುದೇ ಕಾರಣಕ್ಕೂ ಸಾಗಿರ್ ಜೊತೆ ಬಾಳುವುದಿಲ್ಲ. ಶಬೀರ್ ಜೊತೆ ಸಂಸಾರ ನಡೆಸುವುದಾಗಿ ಹೇಳಿದ್ದಾಳೆ.
ಇದೇ ವೇಳೆ ಆಕೆ ಗಡ್ಡದ ವಿಷಯದಲ್ಲಿ ಯಾವುದೇ ತಕರಾರು ಇರಲಿಲ್ಲ. ಆದರೆ ಆತ ಲೈಂಗಿಕವಾಗಿ ದುರ್ಬಲನಾಗಿದ್ದು, ಶಬೀರ್ ಜೊತೆ ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದಾಳೆ. ಈ ವೇಳೆ ವಾದ-ವಿವಾದ ನಡೆದಾಗ ಸಾಗಿರ್ ಪೊಲೀಸ್ ಠಾಣೆಯಲ್ಲಿ ಎಲ್ಲರ ಸಮ್ಮುಖದಲ್ಲಿ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾನೆ. ಇದೇ ವೇಳೆ ಮದುವೆ ಆಗುವಾಗ ಪಡೆದಿದ್ದ 5 ಲಕ್ಷ ರೂ. ವರದಕ್ಷಿಣೆ ಹಣ ನೀಡುವಂತೆ ಆರ್ಶಿ ಆಗ್ರಹಿಸಿದ್ದಾಳೆ.


