ಸೇನಾ ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಕಾನ್ಸ್ಟೇಬಲ್, ರೈಫಲ್ಮ್ಯಾನ್ ಸೇರಿದಂತೆ ವಿವಿಧ 25,487 ಹುದ್ದೆಗಳಿಗೆ ನೇಮಕಾತಿಗೆ ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್ಸಿ) ಅರ್ಜಿ ಆಹ್ವಾನಿಸಿದೆ.
ಬಿಎಸ್ ಎಫ್ ನಲ್ಲಿ ಪುರುಷರಿಗೆ 524, ಮಹಿಳೆಯರಿಗೆ 92 ಸೇರಿದಂತೆ 616 ಹುದ್ದೆಗಳು. ಸಿಐಎಸ್ ಎಫ್ ಹುದ್ದೆಗಳ ಪೈಕಿ ಪುರುಷರಿಗೆ 13,135 ಮಹಿಳೆಯರಿಗೆ 1460 ಸೇರಿದಂತೆ 14,515 ಹುದ್ದೆಗಳು. ಸಿಆರ್ ಪಿಎಫ್ ನಲ್ಲಿ 5366 ಹುದ್ದೆಗಳ ಪೈಕಿ ಪುರುಷರು 5366, ಮಹಿಳೆಯರಿಗೆ 124 ಸೇರಿದಂತೆ ಒಟ್ಟಾರೆ 5490 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಐಟಿಬಿಪಿ ಹುದ್ದೆಗಳ ಪೈಕಿ ಪುರುಷರಿಗೆ 1099, ಮಹಿಳೆಯರಿಗೆ 194 ಸೇರಿದಂತೆ ಒಟ್ಟಾರೆ 1293 ಹುದ್ದೆಗಳು, ಎಆರ್ ವಿಭಾಗದಲ್ಲಿ ಪುರುಷರಿಗೆ 1556 ಪುರುಷರಿಗೆ ಮಹಿಳೆಯರಿಗೆ 150 ಮಹಿಳೆ ಸೇರಿದಂತೆ 1706 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ ಎಸ್ ಎಫ್ ನಲ್ಲಿ ಪುರುಷರಿಗೆ 23 ಹುದ್ದೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಒಟ್ಟು ಹುದ್ದೆಗಳು 25,487 ಇದ್ದು, ಇದರಲ್ಲಿ 23,467 ಹುದ್ದೆಗಳು ಪುರುಷರಿಗೆ ಮೀಸಲಾಗಿದ್ದರೆ, ಮಹಿಳೆಯರಿಗೆ 2020 ಹುದ್ದೆ ಮೀಸಲಾಗಿವೆ.
ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗಿರಬೇಕು.
ವೇತನ: ಕಾನ್ಸ್ಟೇಬಲ್ ಹುದ್ದೆಗೆ 21,700- 69,100 ನಿಗದಿಸಲಾಗಿದೆ.
ವಯೋಮಿತಿ: ಕನಿಷ್ಠ 18, ಜನವರಿ 2025ಕ್ಕೆ ಅನುಗುಣವಾಗಿ 23 ವರ್ಷ ಮೀರಿರಬಾರದು. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಹಾಗೂ ನಿವೃತ್ತ ಸೇವಾದಾರ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾತಿ, ಪ.ಪಂ ಮತ್ತು ಮಹಿಳಾ
ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದ್ದು, ಇತರೆ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ವಿಧಿಸಲಾಗಿದೆ.
ಆಯ್ಕೆ ಹೇಗೆ? ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಗುಣಮಟ್ಟ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲಾತಿ ಪರಿಶೀಲನೆ.
ಹುದ್ದೆಗೆ ಡಿಸೆಂಬರ್ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕಡೆಯ ದಿನವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ssc.gov.in ಇಲ್ಲಿಗೆ ಭೇಟಿ ನೀಡಿ.


