ಓಟಿಟಿಯಿಂದ ವೆಬ್ ಸೀರೀಸ್, ಸಿನಿಮಾ ಮುಂತಾದ ಪಾಕಿಸ್ತಾನದ ವಿಷಯ ಹಾಗೂ ಪ್ರದರ್ಶನಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ದೇಶದ ಎಲ್ಲಾ ಓಟಿಟಿ ಮತ್ತು ಡಿಜಿಟಲ್ ಸೇವಾ ಕಂಪನಿಗಳಿಗೆ ಸೂಚನೆ ಹೊರಡಿಸಿದೆ.
ಪಾಕಿಸ್ತಾನದ ಸಿನಿಮಾ, ಹಾಡು, ವೆಬ್ ಸೀರೀಸ್, ಉತ್ಪನ್ನ ಸೇರಿದಂತೆ ಮಾಧ್ಯಮಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಗುರುವಾರ ಸೂಚನೆ ಹೊರಡಿಸಿದೆ.


