ಐದು ವರ್ಷದ ಮಗಳನ್ನು ಕೊಂದು ಆಕೆಯ ಶವದ ಪಕ್ಕದಲ್ಲೇ ಡ್ರಗ್ಸ್ ಸೇವಿಸಿ ಪ್ರಿಯಕರನ ಜೊತೆ ಹೆತ್ತತಾಯಿ ರಾಸಲೀಲೆ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕೊಲೆ ಕೇಸಲ್ಲಿ ಗಂಡನನ್ನು ಸಿಲುಕಿ ಪ್ರಿಯಕರ ಜೊತೆ ಜೀವನ ನಡೆಸುವ ಉದ್ದೇಶದಿಂದ ತನ್ನ 5 ವರ್ಷದ ಮಗಳನ್ನೇ ಕೊಂದ ತಾಯಿ, ನಂತರ ಶವದ ಪಕ್ಕದಲ್ಲಿಯೇ ರಾತ್ರಿಯೀಡಿ ಇದ್ದು, ಪ್ರಿಯಕರ ಜೊತೆ ಇದ್ದು ಡ್ರಗ್ಸ್ ಸೇವಿಸಿ ಸೆಕ್ಸ್ ಮಾಡಿಕೊಂಡು ಸಮಯ ಕಳೆದಿದ್ದಾಳೆ.
ಲಕ್ನೋದಲ್ಲಿ ಗಂಡ ಶಾರೂಖ್ ಜೊತೆ 8 ವರ್ಷದ ಗೆಳೆಯ ಉದಿತ್ ಎಂಬಾತನ ಜೊತೆ ಲವ್ವಲ್ಲಿ ಬಿದ್ದಿದ್ದ ಪತ್ನಿ ರೋಶಿನಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಮಗಳನ್ನು ಸಾಯಿಸಿ ಆ ಕೊಲೆಯನ್ನು ಗಂಡನ ಮೇಲೆ ಹಾಕಿ ಆತನನ್ನು ಜೈಲಿಗೆ ಕಳುಹಿಸಿದರೆ ಪ್ರಿಯಕರನ ಜೊತೆ ಆರಾಮವಾಗಿ ಇರಬಹುದು ಎಂದು ರೋಶಿನಿ ಪ್ರಿಯಕರ ಜೊತೆ ಸೇರಿಕೊಂಡು ಈ ಪ್ಲಾನ್ ಮಾಡಿದ್ಧಾಳೆ.
5 ವರ್ಷದ ಮಗಳು ಸೈನಾಳ ಬಾಯಿಗೆ ಬಟ್ಟೆ ತುರುಕಿದ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಇಬ್ಬರು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಭಾನುವಾರ ಶಾರೂಖ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ಉದಿತ್ ಸಿಗರೇಟು, ಮದ್ಯ ಹಾಗೂ ಊಟ ತಂದಿದ್ದಾನೆ. ಇಬ್ಬರು ಆಕ್ಷೇಪಾರ್ಹ ಭಂಗಿಯಲ್ಲಿ ಇರುವುದನ್ನು ಆಕಸ್ಮಿಕವಾಗಿ ಮಗಳು ಸೈನಾ ನೋಡಿದ್ದಾಳೆ. ಕೂಡಲೇ ಆಕೆಯನ್ನು ಹಿಡಿದು ಇಬ್ಬರು ಬಾಯಿಗೆ ಬಟ್ಟೆ ತುರುಕಿದ್ದಾರೆ. ನಂತರ ಉದಿತ್ ಕಾಲಿನಿಂದ ಹೊಟ್ಟೆಯ ಮೇಲೆ ನಿಂತಿದ್ದಾನೆ. ಇದರಿಂದ ಸೈನಾ ಉಸಿರುಗಟ್ಟಿ ಕೂಡಲೇ ಮೃತಪಟ್ಟಿದ್ದಾಳೆ.
ಸೈನಾಳನ್ನು ಕೊಲೆ ಮಾಡಿದ ನಂತರ ಇಬ್ಬರೂ ಸ್ನಾನ ಮಾಡಿ ಮದ್ಯ, ಡ್ರಗ್ಸ್ ಸೇವಿಸಿ ನಂತರ ರಾಸಲೀಲೆಯನ್ನು ತೊಡಗಿದ್ದಾರೆ. ನಂತರ ಇಬ್ಬರೂ ಹೋಗಿ ಮಲಗಿದ್ದಾರೆ.
ಮಂಗಳವಾರ ಪೊಲೀಸರಿಗೆ ಕರೆ ಮಾಡಿದ ರೋಶಿನಿ, ಗಂಡ ಶಾರೂಕ್ ಮಹಡಿ ಮೇಲೆ ಮಗಳನ್ನು ಕರೆದುಕೊಂಡು ಹೋಗಿ ಕೊಂದಿದ್ದಾನೆ ಎಂದು ದೂರು ನೀಡಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಶಾರೂಖ್ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರಿಂದ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಅಲ್ಲದೇ ಎರಡು ದಿನಗಳ ಸಿಸಿಟಿವಿ ಪರಿಶೀಲನೆ ವೇಳೆ ಆತನ ಸುಳಿವೇ ಇರಲಿಲ್ಲ. ಅಲ್ಲದೇ ಮರಣೋತ್ತರ ಪರೀಕ್ಷೆಯಲ್ಲಿ ಸೈನಾ ಮೃತಪಟ್ಟು 36 ಗಂಟೆಗಳು ಕಳೆದಿವೆ ಎಂಬುದರ ಸುಳಿವಿನ ಮೇರೆಗೆ ರೋಶಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.


