Thursday, December 25, 2025
Google search engine
Homeದೇಶವೃದ್ಧಾಶ್ರಮದ ಕರಾಳ ಮುಖ ಬಯಲು: ಮಲ ಮೂತ್ರದ ಬಟ್ಟೆ, ಕಟ್ಟಿಹಾಕಿ ಕೊಣೆಯಲ್ಲಿ ಚಿತ್ರಹಿಂಸೆ!

ವೃದ್ಧಾಶ್ರಮದ ಕರಾಳ ಮುಖ ಬಯಲು: ಮಲ ಮೂತ್ರದ ಬಟ್ಟೆ, ಕಟ್ಟಿಹಾಕಿ ಕೊಣೆಯಲ್ಲಿ ಚಿತ್ರಹಿಂಸೆ!

ಮಲ ಮೂತ್ರ ಅಂಟಿದ ಬಟ್ಟೆಗಳನ್ನು ಧರಿಸಿದ್ದ ವೃದ್ಧರು, ಒಬ್ಬರನ್ನು ಕಟ್ಟಿ ಹಾಕಿದ್ದರೆ ಮತ್ತೊಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿರುವುದು, ನಕಲಿ ನರ್ಸ್…

ಇದು ದೆಹಲಿಯ ನೋಯ್ಡಾದ ವೃದ್ಧಾಶ್ರಮದ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಕಂಡು ಬಂದ ಆಘಾತಕಾರಿ ದೃಶ್ಯಗಳು.

ಹೌದು, ಹೆತ್ತವರನ್ನು ನೋಡಿಕೊಳ್ಳಲು ಆಗದೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು ಅಲ್ಲಿ ಅವರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂದು ಪರಿಶೀಲಿಸುವ ಗೋಜಿಗೇ ಹೋಗುವುದಿಲ್ಲ. ಅಲ್ಲಿ ಎಲ್ಲವೂ ಸುವ್ಯವಸ್ಥೆ ಇರುತ್ತದೆ ಎಂದೇ ಭಾವಿಸಿರುತ್ತಾರೆ.

ಆದರೆ ನೋಯ್ಡಾದ ವೃದ್ಧಶಾಶ್ರಮದಲ್ಲಿ ವೃದ್ಧರನ್ನು ಕೈದಿಗಳಂತೆ ನಡೆಸಿಕೊಳ್ಳುತ್ತಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ನೋಯ್ಡಾದ ಸೆಕ್ಟರ್ 55 ರಲ್ಲಿರುವ ವೃದ್ಧಾಶ್ರಮದ ಮೇಲೆ ರಾಜ್ಯ ಮಹಿಳಾ ಆಯೋಗ ಮತ್ತು ನೋಯ್ಡಾ ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಪ್ರೊಬೇಷನ್ ಕಚೇರಿ ಸಿಬ್ಬಂದಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 40 ವೃದ್ಧರನ್ನು ರಕ್ಷಿಸಲಾಯಿತು.

ವೃದ್ಧ ಮಹಿಳೆಯನ್ನು ಕಟ್ಟಿಹಾಕಿ ಕೋಣೆಯಲ್ಲಿ ಬಂಧಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಲಕ್ನೋದ ಸಮಾಜ ಕಲ್ಯಾಣ ಇಲಾಖೆಗೆ ಈ ವೀಡಿಯೋ ಗಮನಿಸಿ ದಾಳಿ ನಡೆಸಿ ವೃದ್ಧರನ್ನು ರಕ್ಷಿಸಿದರು.

ಅಧಿಕಾರಿಗಳು ಶುಕ್ರವಾರ ದಿಢೀರನೆ ದಾಳಿ ನಡೆಸಿದಾಗ ಒಬ್ಬ ವೃದ್ಧೆಯನ್ನು ಬಟ್ಟೆಯಿಂದ ಕಟ್ಟಿ ಕೋಣೆಯಲ್ಲಿ ಬೀಗ ಹಾಕಲಾಗಿತ್ತು, ವೃದ್ಧರೊಬ್ಬರನ್ನು ಕತ್ತಲೆಯ, ನೆಲಮಾಳಿಗೆಯಂತಹ ಕೋಣೆಗಳಲ್ಲಿ ಕೂಡಿಹಾಕಲಾಗಿತ್ತು.

ಅನೇಕ ವೃದ್ಧರಿಗೆ ಸರಿಯಾದ ಬಟ್ಟೆಗಳೇ ಇರಲಿಲ್ಲ, ಕೆಲವರು ಮಲಮೂತ್ರ ಅಂಟಿದ ಬಟ್ಟೆಯಲ್ಲೇ ಇದ್ದರು. ಇನ್ನು ಕೆಲವರಿಗೆ ನಡೆಯಲು ಆಗದ ಸ್ಥಿತಿಯಲ್ಲಿದ್ದರೂ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ ಎಂದು ಹಿಂಸೆ ನೀಡಲಾಗುತ್ತಿತ್ತು. ಅದರಲ್ಲೂ ವೃದ್ಧ ಮಹಿಳೆಯರ ಸ್ಥಿತಿಯಂತೂ ಶೋಚನೀಯವಾಗಿತ್ತು.

ದಾಳಿಯ ವೇಳೆ ಕರ್ತವ್ಯದಲ್ಲಿದ್ದ ನರ್ಸ್ ಕೂಡ ನಕಲಿ ಎಂಬುದು ತಿಳಿದು ಬಂದಿದೆ. ಆಕೆಯ ವಿಧ್ಯಾಭ್ಯಾಸ ಪರಿಶೀಲಿಸಿದಾಗ 12ನೇ ತರಗತಿ ಎಂಬುದು ಬೆಳಕಿಗೆ ಬಂದಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments