ವಿವಾದಾತ್ಮಕ ವಕ್ಫ್ ತಿದ್ದುಪಡಿ ವಿಧೇಯಕ ಸುದೀರ್ಘ ಚರ್ಚೆಯ ನಂತರ ಬುಧವಾರ ತಡರಾತ್ರಿ ಲೋಕಸಭೆಯಲ್ಲಿ ಬಹುಮತದೊಂದಿಗೆ ಅಂಗೀಕಾರ ಪಡೆದಿದೆ.
ಬಜೆಟ್ ಅಧಿವೇಶನದ ನಡುವೆ ಬುಧವಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದ್ದು, ಸುದೀರ್ಘ 11 ಗಂಟೆಗಳ ಚರ್ಚೆಯ ನಂತರ ತಡರಾತ್ರಿ 12 ಗಂಟೆ ಸುಮಾರಿಗೆ ಮತದಾನಕ್ಕೆ ಹಾಕಲಾಯಿತು.
ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸದೀಯ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದು, ಗೃಹ ಸಚಿವ ಅಮಿತ್ ಶಾ, ಜಿತೇಂದರ್ ಪಾಲ್, ಅಸಾಸುದ್ದೀನ್ ಓವೈಸಿ, ರಾಹುಲ್ ಗಾಂಧಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಸುದೀರ್ಘ ಚರ್ಚೆಯ ನಂತರ ಮತದಾನಕ್ಕೆ ಹಾಕಲಾಗಿದ್ದು, ಮಸೂದೆ ಪರ 288 ಹಾಗೂ ವಿರುದ್ಧವಾಗಿ 232 ಮತಗಳು ಬಿದ್ದವು. ಮಸೂದೆ ಪಾಸಾಗಲು 272 ಮತಗಳ ಅಗತ್ಯವಿತ್ತು. ಆಡಳಿತರಾರೂಢ ಎನ್ ಡಿಎ ಮೈತ್ರಿ ಪಕ್ಷದ ಬಳಿ 300ಕ್ಕೂ ಹೆಚ್ಚು ಮತಗಳಿದ್ದವು. ಇಂಡಿಯಾ ಮೈತ್ರಿಕೂಟದ ಬಳಿ ಕಡಿಮೆ ಮತಗಳು ಇದ್ದರೂ ಸಂಪೂರ್ಣ ಮತದಾನದೊಂದಿಗೆ 232 ಮತಗಳು ದಾಖಲಾದವು.


