ನಾವು ದೇಶದ ಅತೀ ದೊಡ್ಡ ದೇಶಭ್ರಷ್ಟರು ಎಂದು ಉದ್ಯಮಿ ವಿಜಯ್ ಮಲ್ಯ ಜನ್ಮಾದಿನಾಚರಣೆಯ ಪಾರ್ಟಿಯಲ್ಲಿ ಮಲ್ಯ ಹಾಗೂ ಲಲಿತ್ ಮೋದಿ ಒಟ್ಟಾಗಿ ಹೇಳಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಪಿಎಲ್ ಟಿ-೨೦ ಟೂರ್ನಿಯನ್ನು ಹುಟ್ಟುಹಾಕಿದ ಲಲಿತ್ ಮೋದಿ, ವೀಡಿಯೊದಲ್ಲಿ ನಾವು ದೇಶಭ್ರಷ್ಟರು, ಭಾರತದ ಅತೀ ದೊಡ್ಡ ದೇಶಭ್ರಷ್ಟರು ಎಂದು ವೀಡಿಯೊದಲ್ಲಿ ಹೇಳಿದ್ದಾರೆ.
ಇಂಟರ್ ನೆಟ್ ಡೌನ್ ಆಗುವಂತಹ ಏನಾದರೂ ಒಂದನ್ನು ನಾವು ಈಗ ಮಾಡೋಣ. ನಮ್ಮ ನಡೆಯಿಂದ ನಿಮ್ಮ ಹೃದಯ ನಿಂತು ಹೋಗಬಹುದು ಎಂದು ವೀಡಿಯೊದಲ್ಲಿ ಲಲಿತ್ ಮೋದಿ ಶೀರ್ಷಿಕೆ ಬರೆದುಕೊಂಡಿದ್ದಾರೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರಿಬ್ಬರು ಭಾರತ ಸರ್ಕಾರವನ್ನು ಹೇಗೆ ಅಣಕಿಸಿದ್ದಾರೆ ಎಂದು ನೋಡಿ ಎಂದು ಒಬ್ಬ ಪ್ರತಿಕ್ರಿಯೆ ನೀಡಿದ್ದಾನೆ.
ಭಾರತದ ಕಾನೂನು ಎಷ್ಟು ಕಳಪೆಯಾಗಿದೆ ಎಂಬುದನ್ನು ಇವರಿಬ್ಬರು ಅಣಕು ಮಾಡಿ ತೋರಿಸುತ್ತಿದ್ದಾರೆ ಎಂದು ಮತ್ತೊಬ್ಬ ಪ್ರತಿಕ್ರಿಯೆ ನೀಡಿದ್ದಾನೆ.


