ಟಿವಿಕೆ ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್ ಅವರ ಡಿಸೆಂಬರ್ 18ರ ಇರೋಡ್ ನಲ್ಲಿ ಹಮ್ಮಿಕೊಂಡಿರುವ ಬೃಹತ್ ಸಾರ್ವಜನಿಕ ಸಭೆ ಮತ್ತು ರ್ಯಾಲಿಗೆ ಅನುಮತಿ ನೀಡಿರುವ ಪೊಲೀಸ್ ಇಲಾಖೆ 84 ಷರತ್ತುಗಳನ್ನು ವಿಧಿಸಿದೆ.
ತಮಿಳುನಾಡು ಇರೋಡ್ ಪೊಲೀಸರು ಕಾರ್ಯಕ್ರಮದ ನಂತರ ಸ್ಥಳವನ್ನು ಸ್ವಚ್ಛಗೊಳಿಸಬೇಕು ಎಂಬುದು ಸೇರಿದಂತೆ 84 ಷರತ್ತು ವಿಧಿಸಿದ್ದು, 50 ಸಾವಿರ ರೂ. ಠೇವಣಿ ಇರಿಸುವಂತೆ ಸೂಚಿಸಿದೆ.
ಟಿವಿಕೆ ಪಕ್ಷ ಈರೋಡ್ ನ ವಿಜಯಮಂಗಳಂ ನಲ್ಲಿ ಡಿಸೆಂಬರ್ 18ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಸಭೆ ನಡೆಸಲು ಅನುಮತಿ ಕೇಳಿದೆ.
ಈರೋಡ್ ನ ದೇವಸ್ಥಾನಕ್ಕೆ ಸೇರಿದ 16 ಎಕರೆ ವಿಸ್ತೀರ್ಣದ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕರ ನಿಯಂತ್ರಣ, ಜಾಗದ ಉತ್ತಮ ನಿರ್ವಹಣೆ ಸೇರಿದಂತೆ 84 ಷರತ್ತು ವಿಧಿಸಲಾಗಿದೆ.
ಕಳೆದ ತಿಂಗಳು ನಡೆದ ರ್ಯಾಲಿ ವೇಳೆ ಉಂಟಾದ ನೂಕುನುಗ್ಗಲಿನಿಂದ 40 ಮಂದಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಟಿವಿಕೆ ಪಕ್ಷದ ರ್ಯಾಲಿಗೆ ಕಟ್ಟೆಚ್ಚರ ವಹಿಸಲಿದ್ದಾರೆ.


