Wednesday, January 28, 2026
Google search engine
Homeಅಪರಾಧ2 ವರ್ಷಗಳಿಂದ ಪೊಲೀಸರನ್ನೇ ಯಾಮಾರಿಸುತ್ತಿದ್ದ ನಕಲಿ ಮಹಿಳಾ ಪೊಲೀಸ್ ಸಬ್ ಇನ್ ಸ್ಪೆಕ್ಟರ್!

2 ವರ್ಷಗಳಿಂದ ಪೊಲೀಸರನ್ನೇ ಯಾಮಾರಿಸುತ್ತಿದ್ದ ನಕಲಿ ಮಹಿಳಾ ಪೊಲೀಸ್ ಸಬ್ ಇನ್ ಸ್ಪೆಕ್ಟರ್!

ಎರಡು ವರ್ಷಗಳಿಂದ ನಕಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪೊಲೀಸ್ ಅಕಾಡೆಮಿಯಲ್ಲಿಯೇ ಇದ್ದು ಪೊಲೀಸರನ್ನೇ ಯಾಮಾರಿಸುತ್ತಿದ್ದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.

ರಾಜಸ್ಥಾನ್ ಪೊಲೀಸ್ ಅಕಾಡೆಮಿಯಲ್ಲಿಯೇ ಪೊಲೀಸ್ ಸಮವಸ್ತ್ರ ಧರಿಸಿ ತರಬೇತಿಯಲ್ಲಿ ಪಾಲ್ಗೊಂಡಿದ್ದೂ ಅಲ್ಲದೇ ಅಲ್ಲದೇ ಹಿರಿಯ ಅಧಿಕಾರಿಗಳ ಜೊತೆ ಫೋಟೊ ಕೂಡ ತೆಗೆಸಿಕೊಂಡಿದ್ದ ಕಿಲಾಡಿ ಮಹಿಳೆಯ ಬಂಡವಾಳ ಕೊನೆಗೂ ಬಯಲಿಗೆ ಬಂದಿದೆ.

ಈ ಐನಾತಿ ನಕಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹೆಸರು ಮೋನಾ ಬುಗಾಲಿಯಾ ಅಲಿಯಾಸ್ ಮೋಲಿ. ಜೈಪುರದಲ್ಲಿ ಬಂದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರೇ ಆಘಾತಕ್ಕೆ ಒಳಗಾಗಿದ್ದಾರೆ. ಸಿಕ್ಕರ್ ಜಿಲ್ಲೆಯಲ್ಲಿ ಈಕೆಯನ್ನು ಬಂಧಿಸಿದ ನಂತರ 2023ರಿಂದ ಈಕೆ ಪೊಲೀಸ್ ಸಮವಸ್ತ್ರದಲ್ಲಿ ಪೊಲೀಸರ ಜೊತೆಗೇ ಇದ್ದು ಎಲ್ಲರನ್ನೂ ಯಾಮಾರಿಸಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ.

ಸಬ್ ಇನ್ ಸ್ಪೆಕ್ಟರ್ ಪ್ರವೇಶ ಪರೀಕ್ಷೆ ಪಾಸ್ ಆಗದೇ ಮೋಲಿ ಪೊಲೀಸರ ತರಬೇತಿ ಕೇಂದ್ರಕ್ಕೆ ಪ್ರವೇಶಿಸಿದ್ದಳು. ಪೊಲೀಸರು ಆಕೆಯ ಕೋಣೆಯನ್ನು ಪರಿಶೀಲಿಸಿದಾಗ ಮೂರು ರೀತಿಯ ಪೊಲೀಸ್ ಸಮವಸ್ತ್ರ ಹಾಗೂ 7 ಲಕ್ಷ ರೂ. ನಗದು ಹಾಗೂ ಪರೀಕ್ಷಾ ಮಾದರಿ ಪತ್ರಿಕೆಗಳು, ನಕಲಿ ಗುರುತು ಪತ್ರಗಳು ಪತ್ತೆಯಾಗಿದೆ.

ರಾಜಸ್ಥಾನ್ ನ ನಗೌರ್ ಜಿಲ್ಲೆಯ ನಿಂಬಾ ಕೇ ದಾಸ್ ಗ್ರಾಮದ ಟ್ರಕ್ ಚಾಲಕನ ಪುತ್ರಿ ಆಗಿರುವ ಮೋಲಿ 2021ರಲ್ಲಿ ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದಿದ್ದಳು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಲಿಲ್ಲ. ಆ ನಂತರ `ಮೋಲಿ ದೇವಿ’ ಹೆಸರಿನಲ್ಲಿ ನಕಲಿ ಗುರುತುಪತ್ರ ಮಾಡಿಸಿಕೊಂಡ ಮೋಲಿ ಸಾಮಾಜಿಕ ಜಾಲತಾಣದಲ್ಲಿ ತಾನೊಬ್ಬ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಎಂದು ಬಿಂಬಿಸಿಕೊಂಡಳು.

ಕ್ರೀಡಾ ಮೀಸಲಿನಿಂದ ಸಬ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾಗಿ ಹೇಳಿಕೊಂಡು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಗಳಾಗಿ ನೇಮಕಗೊಂಡವರ ವಾಟ್ಸಪ್ ಗ್ರೂಪ್ ಗೆ ಸೇರಿಕೊಂಡಳು. ಈ ಮೂಲಕ ಪೊಲೀಸ್ ಪರೇಡ್ ಮೈದಾನ ಪ್ರವೇಶಿಸಿ ತರಬೇತಿಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ನಂತರ ಹಿರಿಯ ಅಧಿಕಾರಿಗಳ ಜೊತೆ ಫೋಟೊ ತೆಗೆಸಿಕೊಳ್ಳುತ್ತಿದ್ದಳು. ಅಲ್ಲದೇ ವೃತ್ತಿಜೀವನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಷಣ ಕೂಡ ಮಾಡುತ್ತಿದ್ದಳು.

ರಾಜಸ್ಥಾನ್ ಅಕಾಡೆಮಿಯ ಹೊರಾಂಗಣ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಕಟ್ಟುನಿಟ್ಟಾದ ಭದ್ರತೆಯ ಕಾರಣ ಒಳಾಂಗಣ ತರಬೇತಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಇಷ್ಟಕ್ಕೂ ಈಕೆ ನಕಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಆಗಿ ವಂಚಿಸಲು ಕಾರಣ ಹೆತ್ತವರನ್ನು ಮೆಚ್ಚಿಸಲು ಮಾತ್ರವಲ್ಲ, ನಾಲ್ವರು ಸೋದರಿಯರಿಗಾಗಿ. ಸಂಬಳ ಹಾಗೂ ಹಣಕಾಸಿನ ಅಗತ್ಯತೆಗಳಿಗಾಗಿ ಪೊಲೀಸ್ ಅಧಿಕಾರ ಬಳಸಿ ಹಣ ವಸೂಲು ಮಾಡುತ್ತಿರುವುದಾಗಿ ಮೋಲಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments