ನೀಟ್ ಯುಜಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಸೋರಿಕೆ ಹಿಂದಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾದ ರಾಕಿ ಅಲಿಯಾಸ್ ರಾಕೇಶ್ ರಂಜನ್ ಎಂಬಾತನನ್ನು ಸಿಬಿಐ ಬಂಧಿಸಿದೆ.
ಬಿಹಾರದ ಪಾಟ್ನಾ ಮತ್ತು ಪಶ್ಚಿಮ ಬಂಗಾಳದ ಕೋಲ್ಕತಾದ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದ ಸಿಬಿಐ ಮಾಸ್ಟರ್ ಮೈಂಡ್ ರಾಕೇಶ್ ರಂಜನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದೆ.
ರಾಕೇಶ್ ರಂಜನ್ ನನ್ನು ಗುರುವಾರ ಮಧ್ಯಾಹ್ನ ಬಂಧಿಸಲಾಗಿದ್ದು, 10 ದಿನಗಳ ಕಾಲ ಸಿಬಿಐ ಕಸ್ಟಡಿಗೆ ವಹಿಸಲಾಗಿದೆ.
ಪ್ರಕರಣದಲ್ಲಿ ಇದುವರೆಗೆ ಜಾರ್ಖಂಡ್ ನ ಹಜರಿಬಾದ್ ನ ಪ್ರಿನ್ಸಿಪಾಲ್ ಮತ್ತು ವೈಸ್ ಪ್ರಿನ್ಸಿಪಾಲ್ ಸೇರಿದಂತೆ 12ಕ್ಕೂ ಅಧಿಕ ಮಂದಿಗೆ ಬಂಧಿಸಲಾಗಿದೆ.