Friday, November 22, 2024
Google search engine
Homeಆರೋಗ್ಯಅತಿಯಾದ ಬೊಜ್ಜಿನಿಂದ ಸಾವು: ಮೊದಲ ಬಾರಿ ಭಾರತದ ಮಾರ್ಗಸೂಚಿ ಪ್ರಕಟ!

ಅತಿಯಾದ ಬೊಜ್ಜಿನಿಂದ ಸಾವು: ಮೊದಲ ಬಾರಿ ಭಾರತದ ಮಾರ್ಗಸೂಚಿ ಪ್ರಕಟ!

ಅತಿಯಾದ ಬೊಜ್ಜು ಮಾರಣಾಂತಿಕವಾಗಿದ್ದು, ಸೈಲೆಂಟ್ ಕಿಲ್ಲರ್ ಆಗಿ ಕೆಲಸ ಮಾಡುವ ಬೊಜ್ಜಿನಿಂದ ಹೃದಯಸ್ತಂಭನ ಸಂಭವಿಸುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಭಾರತದ ಹೃದಯಶಾಸ್ತ್ರ ತಜ್ಞರ ಸಮಿತಿ ಮಾರ್ಗಸೂಚಿ ಪ್ರಕಟಿಸಿದೆ.

ಅತಿಯಾದ ಬೊಜ್ಜಿನಿಂದ ಹೃದಯಾಘಾತ ಅಥವಾ ಹೃದಯ ಸ್ತಂಭನ ಆಗುವ ಸಾಧ್ಯತೆ ಹೆಚ್ಚಿದೆ. ಇದುವರೆಗೂ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಾಜಿ ನೀಡಿದ್ದ ಮಾರ್ಗಸೂಚಿಯನ್ನು ಜಗತ್ತಿನಾದ್ಯಂತ ಅನುಸರಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಭಾರತೀಯ ಕಾರ್ಡಿಯಾಲಜಿಕಲ್ ಸೊಸೈಟಿಯ 22 ಸದಸ್ಯರ ತಂಡ ಜುಲೈ 4ರಂದು ಮಾರ್ಗಸೂಚಿ ಪ್ರಕಟಿಸಿದೆ.

ಡೆಸ್ಲಿಪಿಡೆಮಿಯಾ ಅಂದರೆ ದೇಹದ ರಕ್ತದಲ್ಲಿ ಅವಶ್ಯಕತೆಗಿಂತ ಹೆಚ್ಚು ನೀರಿನ ಅಂಶ ಅಥವಾ ಬೊಜ್ಜಿನ ಅಂಶ ಸೇರ್ಪಡೆಯಾಗುವುದು. ಇದರಿಂದ ಅನಿರೀಕ್ಷಿತ ಹೃದಯಾಘಾತ ಅಥವಾ ಹೃದಯಸ್ತಂಭನ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನು ತಡೆಯಲು ವ್ಯಾಯಾಮ, ಮಿತ ಆಹಾರ ಮತ್ತು ಧ್ಯಾನದ ಅವಶ್ಯಕತೆ ಬೇಕಾಗಿದೆ.

ದೇಹದಲ್ಲಿ ಕೆಟ್ಟ ಬೊಜ್ಜು ಹಾಗೂ ಒಳ್ಳೆಯ ಬೊಜ್ಜು ಇರುತ್ತದೆ. ಆದರೆ ಇದರಲ್ಲಿ ಕೆಟ್ಟ ಬೊಜ್ಜು ಗುರುತಿಸಿ ಅದನ್ನು ಕರಗಿಸಬೇಕು. ಇದರಲ್ಲಿ ಡೆಸ್ಲಿಪಿಡೆಮಿಯಾ ಎಂಬ ಬೊಜ್ಜಿಗೆ ಯಾವುದೇ ಲಕ್ಷಣ ಇಲ್ಲ. ಇದು ಮನುಷ್ಯರ ಪಾಲಿಗೆ ಸೈಲೆಂಟ್ ಕಿಲ್ಲರ್ ಆಗಿದೆ.

ನೂತನ ಮಾರ್ಗಸೂಚಿ ಪ್ರಕಾರ ದೇಹದಲ್ಲಿ 100 ಎಂಎಲ್/ಡಿಎಲ್ (ಸಕ್ಕರೆ ಪ್ರಮಾಣ ಮಿಲಿ ಗ್ರಾಂನಲ್ಲಿ) ಇರಬೇಕು. ಇದನ್ನು ದಾಟಿದರೆ ಅಪಾಯದ ಸೂಚನೆ ಎಂದು ಹೇಳಲಾಗಿದೆ ಎಂದು ಏಮ್ಸ್ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಡಾ.ಎಸ್. ರಾಮಕೃಷ್ಣನ್ ಹೇಳಿದ್ದಾರೆ.

ಕೊಲೆಸ್ಟ್ರಾಲ್ ಕಾಪಾಡಲು ಭಾರತದ ಮಾರ್ಗಸೂಚಿ

ಅಪಾಯದ ಅಂದಾಜು ಮತ್ತು ಚಿಕಿತ್ಸೆಗಾಗಿ ಉಪವಾಸ-ಅಲ್ಲದ ಲಿಪಿಡ್ ಮಾಪನಗಳನ್ನು ಶಿಫಾರಸು ಮಾಡುತ್ತವೆ, ಸಾಂಪ್ರದಾಯಿಕ ಉಪವಾಸ ಮಾಪನಗಳಿಂದ ಬದಲಾಗುತ್ತವೆ.

ಸಾಧಾರಣ ಕೊಬ್ಬಿನ ಸೇವನೆಗೆ ಹೋಲಿಸಿದರೆ ಹೆಚ್ಚಿನ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಮಟ್ಟವನ್ನು ಒಳಗೊಂಡಿರುವ ಆಹಾರದ ಆಯ್ಕೆಗಳು ತಡೆಗಟ್ಟುವಿಕೆಗೆ ಪ್ರಮುಖ ಕೊಡುಗೆ ನೀಡುತ್ತವೆ ಎಂದು ವೈದ್ಯರು ಹೇಳಿದ್ದಾರೆ.

“ಹೆಚ್ಚಿನ LDL-ಕೊಲೆಸ್ಟರಾಲ್ ಮತ್ತು HDL-ಕೊಲೆಸ್ಟರಾಲ್ ಅನ್ನು ಸ್ಟ್ಯಾಟಿನ್ಗಳು ಮತ್ತು ಮೌಖಿಕ ನಾನ್-ಸ್ಟ್ಯಾಟಿನ್ ಔಷಧಿಗಳ ಸಂಯೋಜನೆಯೊಂದಿಗೆ ನಿಯಂತ್ರಿಸಬಹುದು. ಇದು ಸಹಾಯ ಮಾಡದಿದ್ದರೆ, PCSK9 ಪ್ರತಿರೋಧಕಗಳು ಅಥವಾ Inclisiran ನಂತಹ ಚುಚ್ಚುಮದ್ದಿನ ಲಿಪಿಡ್-ಕಡಿಮೆಗೊಳಿಸುವ ಔಷಧಗಳನ್ನು ಶಿಫಾರಸು ಮಾಡಲಾಗುತ್ತದೆ.

ಮಾರ್ಗಸೂಚಿಗಳ ಪ್ರಕಾರ, ಒಬ್ಬ ವ್ಯಕ್ತಿಯು 2 ವರ್ಷಗಳಲ್ಲಿ ಪುನರಾವರ್ತಿತ ನಾಳೀಯ ಘಟನೆಗಳನ್ನು (ಪೆರಿಫೆರಲ್ ಆರ್ಟರಿ ಡಿಸೀಸ್ ಮತ್ತು ಅಪಧಮನಿಕಾಠಿಣ್ಯದಂತಹ) ಹೊಂದಿದ್ದರೆ ಹೃದಯ ಕಾಯಿಲೆಯ ಅತ್ಯಂತ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments