ಉದ್ದೀಪನ ಮದ್ದು ಪ್ರಕರಣದಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ ಅವರನ್ನು ಅಮಾನತು ಮಾಡಲಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದು ಅನುಮಾನವಾಗಿದೆ.
ಮಾರ್ಚ್ 10ರಂದು ಸೋನಾಪೇಟ್ ನಲ್ಲಿ ನಡೆದ ಟ್ರಯಲ್ಸ್ ವೇಳೆ ಸಂಗ್ರಹಿಸಲಾಗಿದ್ದ ಮೂತ್ರದ ಮಾದರಿಯಲ್ಲಿ ಮಾದಕದ್ರವ್ಯ ಸೇವನೆ ದೃಢಪಟ್ಟಿತ್ತು.
ಭಜರಂಗ್ ಪೂನಿಯಾ ಅವರನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಸ್ಪರ್ಧೆಗಳಿಂದ ಅಮಾನತು ಮಾಡಲಾಗಿದ್ದು, ಇದೇ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದು ಅನುಮಾನವಾಗಿದೆ.
ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನಿತ್ ಪೊಗತ್ ಭಾರತೀಯ ಕುಸ್ತಿಪಟು ಅಧ್ಯಕ್ಷ ಬೃಜ್ ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ್ದರು.