Friday, November 22, 2024
Google search engine
Homeಅಪರಾಧನಿಶ್ಚಿತಾರ್ಥ ದಿನವೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ತಲೆ ಕಡಿದು ರುಂಡದ ಕಿರಾತಕ ಪರಾರಿ!

ನಿಶ್ಚಿತಾರ್ಥ ದಿನವೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ತಲೆ ಕಡಿದು ರುಂಡದ ಕಿರಾತಕ ಪರಾರಿ!

ಎಸ್ಸೆಸ್ಸೆಲ್ಸಿ ಪಾಸಾದ ಖುಷಿಯಲ್ಲಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ತಲೆ ಕಡಿದು ಮಧ್ಯ ವಯಸ್ಕ ವ್ಯಕ್ತಿಯೊಬ್ಬ ರುಂಡದ ಪರಾರಿಯಾದ ಆಘಾತಕಾರಿ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಸೋಮಚಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಲೂರ್ಗು ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಯುವತಿಯ ರುಂಡದ ಪರಾರಿ ಆಗಿರುವ ಓಂಕಾರಪ್ಪನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಗುರುವಾರ ಎಸ್ಸೆಸ್ಸೆಲ್ಸಿ ವಿದ್ತಾರ್ಥಿನಿ ಪರೀಕ್ಷೆಯಲ್ಲಿ ಪಾಸಾದ ಸಂಭ್ರಮದಲ್ಲಿದ್ದಳು. ಆದರೆ ಆಕೆಗೆ ಅದೇ ದಿನ 35 ವರ್ಷದ ಓಂಕಾರಪ್ಪನ ಜೊತೆ ಮದುವೆ ನಿ ಶ್ಚಿತಾರ್ಥ ನಿಗದಿಯಾಗಿತ್ತು

ಹುಡುಗಿ ಅಪ್ರಾಪ್ತೆಯಾಗಿದ್ದು, ಬಾಲ್ಯ ವಿವಾಹ ನಡೆಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಸೋಮವಾರಪೇಟೆ ಗ್ರಾಮಾಂತರ ಪೊಲೀಸರು ನಿಶ್ಚಿತಾರ್ಥ ತಡೆದಿದ್ದರು.

ಇದರಿಂದ ಆಕ್ರೋಶಗೊಂಡ ಓಂಕಾರಪ್ಪ ಯುವತಿಯ ಮನೆಗೆ ನುಗ್ಗಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿ ರುಂಡವನ್ನು ಹೊತ್ತು ಪರಾರಿಯಾಗಿದ್ದಾನೆ.

ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments