ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಒಕ್ಕೂಟ INDIA ಬ್ಲಾಕ್ ಸೀಟು ಹಂಚಿಕೆ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದು, ಉದ್ಧವ್ ಠಾಕ್ರೆ ಬಣದ ಶಿವಸೇನೆ ಅತೀ ಹೆಚ್ಚು 21 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ.
ಮಹಾರಾಷ್ಟ್ರದಲ್ಲಿ 41 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಉದ್ಧವ್ ಠಾಕ್ರೆ ಬಣ 21, ಕಾಂಗ್ರೆಸ್ 17 ಮತ್ತು ಶರದ್ ಪವಾರ್ ಬಣದ ಎನ್ ಸಿಪಿ 10 ಸ್ಥಾನಗಳನ್ನು ಹಂಚಿಕೊಂಡಿವೆ.
ಶಿವಸೇವೆ ಸಾಂಗ್ಲಿ ಮತ್ತು ಬಿವಾಂಡಿ ಕ್ಷೇತ್ರಗಳನ್ನು ಕಾಂಗ್ರೆಸ್ ನಿಂದ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಪ್ರತಿಯಾಗಿ ಶಿವಸೇನೆ ಭದ್ರಕೋಟೆಯಾದ ಮುಂಬೈ ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಪಡೆದಿದೆ.