ಹೋಳಿ ಸಂಭ್ರಮದಲ್ಲೆ ಎಣ್ಣೆ ಪಾರ್ಟಿ ವೇಳೆ ಹೊಡೆದಾಟ: ಮೂವರು ಬಿಹಾರಿಗಳ ಸಾವು
ಹೋಳಿ ಆಚರಣೆ ವೇಳೆ ಕುಡಿದ ನಶೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಮೂವರು ಬಿಹಾರಿಗಳು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ನಿರ್ಮಾಣ ಹಂತದ ಪೋರ್ ವಾಲ್ ಅವೆನ್ಯೂ ಅಪಾರ್ಟ್ಮೆಂಟ್ನ 3ನೇ ಮಹಡಿಯಲ್ಲಿ ಈ ಘಟನೆ ನಡೆದಿದೆ. ಅನ್ಸು (19), ರಾಧೆ ಶ್ಯಾಮ್ (20) ಮತ್ತು…
ಮಂಗಳೂರಿನಲ್ಲಿ 74 ಕೋಟಿ ಮೌಲ್ಯದ ಡ್ರಗ್ಸ್ ವಶ: ಇಬ್ಬರು ವಿದೇಶೀ ಮಹಿಳೆಯರು ಅರೆಸ್ಟ್
ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲ ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆಫ್ರಿಕಾ ಮೂಲದ ಇಬ್ಬರು ಮಹಿಳೆಯನ್ನು ಬಂಧಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದು ಎಲೆಕ್ಟ್ರಾನಿಕ್ ಸಿಟಿ ಆಗಮಿಸಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದೇವೆ. ದಕ್ಷಿಣ ಆಫ್ರಿಕಾ ಮೂಲದ ಬಂಬಾ ಫಾಂಟಾ (31) ಹಾಗೂ ಅಬಿಗೈಲ್ ಅಡೋನಿಸ್ (30) ಬಂಧಿತರಾಗಿದ್ದಾರೆ. ಇವರ ಬಳಿ ಇದ್ದ…
ಭಾರತ-ನ್ಯೂಜಿಲೆಂಡ್ ಫೈನಲ್ ಗೆ 5000 ಕೋಟಿ ಬೆಟ್ಟಿಂಗ್: ಅಖಾಡಕ್ಕೆ ದಾವೂದ್ ಗ್ಯಾಂಗ್
ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಜಗತ್ತಿನಾದ್ಯಂತ 5000 ಕೋಟಿ ರೂ. ಬೆಟ್ಟಿಂಗ್ ನಡೆದಿದೆ ಎಂದು ಹೇಳಲಾಗಿದೆ. ದುಬೈನಲ್ಲಿ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಬುಕ್ಕಿಗಳ ಪ್ರಕಾರ ಭಾರತ ತಂಡ ಹಾಟ್ ಫೇವರಿಟ್ ಆಗಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಡಿ ಕಂಪನಿ ಕೂಡ ಬೆಟ್ಟಿಂಗ್ ಗೆ ಇಳಿದಿದೆ ಎಂದು ಹೇಳಲಾಗಿದೆ….
ಬೆಂಗಳೂರು ಸೀರೆ ಉತ್ಸವ 2025 ಉದ್ಘಾಟಿಸಿದ ಬಿಜೆ ಗಣೇಶ್
ಬೆಂಗಳೂರು: ಬೆಂಗಳೂರು ಸೀರೆ ಉತ್ಸವ 2025 ಅನ್ನು ಇಂದು ಶುಭ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಒಕ್ಕೂಟ ಲಿಮಿಟೆಡ್‌ನ ಅಧ್ಯಕ್ಷ ಬಿಜೆ ಗಣೇಶ್ ಅಧಿಕೃತವಾಗಿ ಉದ್ಘಾಟಿಸಿದರು. ನವದೆಹಲಿಯ ರಾಷ್ಟ್ರೀಯ ವಿನ್ಯಾಸ ಕೇಂದ್ರ (ಎನ್‌ಡಿಸಿ), ಭಾರತ ಸರ್ಕಾರದ ಅಭಿವೃದ್ಧಿ ಆಯುಕ್ತರು ಮತ್ತು ಜವಳಿ ಸಚಿವಾಲಯದ (ಕೈಮಗ್ಗಗಳು) ಸಹಯೋಗದೊಂದಿಗೆ ಆಯೋಜಿಸಲಾದ ಈ ವಾರದ ಉತ್ಸವವು…
ಐಸಿಸಿ ಜಾಗತಿಕ ಕಮಾಂಡರ್ ಹತ್ಯೆಗೈದ ಅಮೆರಿಕ ವಾಯುಪಡೆ!
ಇರಾಕ್ ಅಲ್ ಅನ್ಬರ್ ಪ್ರಾಂತ್ಯದ ಮೇಲೆ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಐಸಿಸಿನ ಜಾಗತಿಕ ಎರಡನೇ ನಾಯಕ ಅಬು ಖಾದಿಜಿಹ್ ಹತ್ಯೆಯಾಗಿದ್ದಾನೆ. ಇರಾಕ್ ಗುಪ್ತಚರರು ನೀಡಿದ ಮಾಹಿತಿ ಆಧರಿಸಿ ಮಾರ್ಚ್ 13ರಂದು ತಡರಾತ್ರಿ ವಾಯು ದಾಳಿ ನಡೆಸಿದ ಅಮೆರಿಕ ಜಗತ್ತಿನ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಎರಡನೇ ಕಮಾಂಡರ್ ಹತ್ಯೆ ಮಾಡಿದೆ. ಅಬು ಖಾದಿಜಿಹ್ ಜಾಗತಿಕ…
ಅನಧಿಕೃತ ಮರಳು ಸಾಗಾಟ: 7629 ಎಫ್ಐಆರ್ ದಾಖಲು, 40 ಕೋಟಿ ದಂಡ
ಬೆಂಗಳೂರು:ಅನಧಿಕೃತವಾಗಿ ಮರಳು ಸಾಗಾಣಿಕೆ ತಡೆಯಲು ಕಾರ್ಯಪ್ರವೃತ್ತರಾಗಿದ್ದು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್ ಪೋರ್ಸ್ ಮರಳು ಸಮಿತಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಕಳೆದ ಐದು ವರ್ಷಗಳಲ್ಲಿ 47 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು. ವಿಧಾನಪರಿಷತ್ ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು,ಅಕ್ರಮ…
ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗನೇ: ಸುಮಲತಾ
ಕೊನೆಯ ಉಸಿರು ಇರೋವವರೆಗೂ ದರ್ಶನ್ ನನ್ನ ಮಗನೇ. ಇನ್ ಸ್ಟಾದಲ್ಲಿ ಅನ್ ಫಾಲೋ ಮಾಡಿದರೆ ಸಂಬಂಧ ಹಾಳಾಗುತ್ತಾ ಎಂದು ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸುಮಲತಾ, ಪುತ್ರ ಅಭಿಷೇಕ್ ಮತ್ತು ಅಭಿಷೇಕ್ ಪತ್ನಿ ಅವಿವಾ ಅವರನ್ನು ಅನ್ ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಫೇಸ್ ಬುಕ್ ನಲ್ಲಿ ಹಾಕಿದ…
ರೈಲು ಹೈಜಾಕ್ ಮಾಡಿದ್ದ 27 ಬಂಡುಕೋರರ ಹತ್ಯೆಗೈದ ಪಾಕಿಸ್ತಾನ ಸೇನೆ; 150 ಒತ್ತೆಯಾಳುಗಳ ರಕ್ಷಣೆ!
ರೈಲು ಹೈಜಾಕ್ ಮಾಡಿದ್ದ 27 ಬಲೂಚಿಸ್ತಾನದ ಬಂಡುಕೋರರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಸೇನೆ 150 ಒತ್ತೆಯಾಳುಗಳನ್ನು ರಕ್ಷಿಸಿದೆ. ಪಾಕಿಸ್ತಾನ ಪೇಶಾವರಕ್ಕೆ ಹೊರಟ್ಟಿದ್ದ ಜಾಫರ್ ರೈಲನ್ನು ನಿನ್ನೆ ಅಪಹರಿಸಿದ್ದ ಬಂಡುಕೋರರು ಬಲೂಚಿಸ್ತಾನಕ್ಕೆ ಕೊಂಡೊಯ್ದಿದ್ದರು. ಮಂಗಳವಾರ ರಾತ್ರಿ ಪೂರ್ಣ ಪ್ರಮಾಣದ ಸೇನೆ ಬಳಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ 27 ಬಂಡುಕೋರರನ್ನು ಕೊಂದು 150 ಪ್ರಯಾಣಿಕರನ್ನು ರಕ್ಷಿಸಿದೆ. ಒತ್ತೆಯಾಳುಗಳಾಗಿ…
ಪಾಕಿಸ್ತಾನದ ರೈಲು ಹೈಜಾಕ್: 11 ಯೋಧರ ಹತ್ಯೆ, 180 ಪ್ರಯಾಣಿಕರ ಒತ್ತೆ!
ಇಸ್ಲಾಮಾಬಾದ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್ ಮಾಡಿ ನೂರಾರು ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಮಾಡಿಕೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವಾಗಿ ಘೋಷಿಸುವಂತೆ ಆಗ್ರಹಿಸಿ ಬಲೂಚಿಸ್ತಾನ ಲಿಬರಲ್ ಆರ್ಮಿ [ಬಿಎಲ್ ಎ] ರೈಲನ್ನು ಹೈಜಾಕ್ ಮಾಡಿದ್ದು, ಪಾಕಿಸ್ತಾನ ಸೇನೆಯ 11 ಮಂದಿಯನ್ನು ಹತ್ಯೆಗೈಯ್ಯಲಾಗಿದ್ದು, 180ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದೆ….
ಆಮದು ಸುಂಕ ಇಳಿಸಲು ಒಪ್ಪಿಕೊಂಡಿಲ್ಲ: ಅಮೆರಿಕಕ್ಕೆ ಭಾರತ ತಿರುಗೇಟು
ಅಮೆರಿಕದ ವಸ್ತುಗಳ ಮೇಲಿನ ಆಮದು ಸುಂಕ ಇಳಿಸುವುದಾಗಿ ಒಪ್ಪಿಕೊಂಡಿಲ್ಲ ಎಂದು ಭಾರತ ಸ್ಪಷ್ಟನೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದೆ. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ವಸ್ತುಗಳ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆಯೋ ಅಷ್ಟೇ ಪ್ರಮಾಣದ…