ದೇಹದಲ್ಲಿ ನೋವು, ಸಂಧಿವಾತ, ಕಿಡ್ನಿ ಸಮಸ್ಯೆಗಳು ಇಂದು ಸಾಮಾನ್ಯ ಎಂಬಂತಾಗಿದೆ. ವೈದ್ಯರ ಬಳಿ ಹೋದಾಗ ಯೂರಿಕ್ ಆಸಿಡ್ ಎಂದು ಹೇಳುತ್ತಾರೆ. ಅದಕ್ಕಾಗಿ ಕೆಲವೊಂದು ಆಹಾರ ವಸ್ತುಗಳನ್ನು ತಿನ್ನದಂತೆ ಸಲಹೆ ನೀಡುತ್ತಾರೆ. ಅದೇ ರೀತಿ ಕೆಲವೊಂದು ಅಹಾರ ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಸಹಕಾರಿ ಎಂದೂ ಹೇಳುತ್ತಾರೆ.
ಯಾವುದು ತಿಂದರೆ ಉತ್ತಮ: ಯೂರಿಕ್ ಆಸಿಡ್ ಹೆಚ್ಚಾದರೆ ಪಾಪೈನ್ ಎಂಬ ಪ್ರೋಟಿಯೋಲೈಟಿಕ್ ಕಿಣ್ವ ಹೊಂದಿರುವ ಪಪ್ಪಾಯಿಯನ್ನು ಪ್ರತಿದಿನ ತಿನ್ನಬೇಕು. ಇದು ಪ್ರೋಟೀನ್ ಗಳ ಜೀರ್ಣಕ್ಕೆ ಸಹಕಾರಿ. ರಕ್ತದಲ್ಲಿನ ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ.
ಪ್ರತಿದಿನ ತುಳಸಿ ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾದ ಪ್ಯೂರಿನ್‌ಗಳು ಬಿಡುಗಡೆಯಾಗಲು ಪ್ರಾರಂಭಿಸುತ್ತವೆ. ರಕ್ತದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗಲು ಪ್ರಾರಂಭಿಸಿದರೆ ಪ್ರತಿದಿನ 4 ರಿಂದ 5 ತುಳಸಿ ಎಲೆಗಳನ್ನು ಜಗಿದು ತಿನ್ನಬೇಕು. ಅದೇ ರೀತಿ ಕುಂಬಳಕಾಯಿ ತಿನ್ನುವುದು ಉತ್ತಮ. ಇದು ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್ ಮತ್ತು ಲುಟೀನ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೇರಳವಾಗಿ ಒಳಗೊಂಡಿದೆ. ಈ ಉತ್ಕರ್ಷಣ ನಿರೋಧಕಗಳು ನೋವು, ಉರಿಯೂತ ಮತ್ತು ಯೂರಿಕ್ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಯಾವುದು ಸೇವಿಸಬಾರದು: ಯೂರಿಕ್ ಆಮ್ಲ ಸಮಸ್ಯೆ ಇರುವವರು ಬಿಯರ್, ವೋಡ್ಕಾ, ವಿಸ್ಕಿ, ಆರ್ಗನ್ ಮಾಂಸ ತಿನ್ನಬಾರದು. ಯೂರಿಕ್ ಆಸಿಡ್ ಹೆಚ್ಚಾದಾಗ ಐಸ್ ಕ್ರೀಂ, ಚಿಪ್ಸ್, ಪ್ಯಾಕೆಟ್ ಫುಡ್, ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ಸೇವಿಸಬಾರದು. ಪ್ರತಿದಿನ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವ ಜೊತೆಗೆ ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಿದರೆ ಉತ್ತಮ. ಸಿಹಿ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡುವುದು ಅಗತ್ಯ.
ಪೌಷ್ಟಿಕಾಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಪಾಲಕ್ ಸೊಪ್ಪು ಹೆಚ್ಚಿನ ಪ್ರಮಾಣದ ಪ್ಯೂರಿನ್ ಹೊಂದಿರುತ್ತದೆ. ಜೀರ್ಣಕ್ರಿಯೆಯಲ್ಲಿ ಇದು ಯೂರಿಕ್ ಆಮ್ಲವಾಗಿ ಬದಲಾಗುತ್ತದೆ. ಹೀಗಾಗಿ ಪಾಲಕ್ ಸೊಪ್ಪನ್ನು ಮಿತವಾಗಿ ಸೇವಿಸಿದರೆ ಸಾಕು. ಟೊಮೆಟೊ ದೇಹದಲ್ಲಿ ಪ್ಯೂರಿನ್ ಅಥವಾ ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚು ಮಾಡುತ್ತವೆ. ಟೊಮೆಟೊ ಹಣ್ಣುಗಳನ್ನು ಮಿತವಾಗಿ ಬಳಸಿದರೆ ಉತ್ತಮ. ಬೇಳೆ, ಅಣಬೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಸೆವನೆ ಸಮಸ್ಯೆಯಯನ್ನು ತೀವ್ರಗೊಳಿಸುವುದು, ಮಿತಿ ಇದ್ದರೆ ಉತ್ತಮ. ಬೀಟ್ ರೂಟ್ ಸೇವನೆ ಕೂಡ ಮಿತವಾಗಿರಬೇಕು.