ಭಾರತ ಪುರುಷ ಮತ್ತು ಮಹಿಳೆಯರ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಮಿಶ್ರ ವಿಭಾಗದಲ್ಲಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭರ್ಜರಿ ಆರಂಭ ಪಡೆದಿದೆ.
ಭಾರತ ಮಹಿಳೆಯರ ತಂಡ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್ ಫೈನಲ್ ಗೆ ನೇರ ಪ್ರವೇಶ ಗಿಟ್ಟಿಸಿದರೆ, ಪುರುಷರ ತಂಡ ಮೂರನೇ ಸ್ಥಾನಿಯಾಗಿ ಎಂಟರ ಘಟ್ಟಕ್ಕೆ ಲಗ್ಗೆ ಹಾಕಿತು. ಮತ್ತೊಂದು ವಿಶೇಷ ಅಂದರೆ ಆರ್ಚರಿಯ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಎಲ್ಲಾ ಮಹಿಳಾ ಸ್ಪರ್ಧಿಗಳು ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಮಿಶ್ರ ವಿಭಾಗದ ತಂಡದಲ್ಲಿ ಭಾರತ 1347 ಅಂಕದೊಂದಿಗೆ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಧೀರಜ್ ಬೊಮ್ಮದೇವರ 681 ಅಂಕ ಪಡೆದರೆ, ಅಂಕಿತ ಭಕತ್ 666 ಅಂಕ ಗಳಿಸಿದ ಸಾಧನೆ ಮಾಡಿ ಭಾರತದ ಶುಭಾರಂಭಕ್ಕೆ ಕಾರಣವಾದರು.
ಅಂಕಿತಾ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಉತ್ತಮ ಪ್ರದರ್ಶನದಿಂದ ಭಾರತ ಮಹಿಳಾ ತಂಡ ಅಗ್ರಸ್ಥಾನಿಯಾಗಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಅಂಕಿತಾ 666 ಅಂಕದೊಂದಿಗೆ 11ನೇ ಸ್ಥಾನ ಗಳಿಸಿದರೆ, ದೀಪಿಕಾ ಕುಮಾರಿ 658 ಅಂಕದೊಂದಿಗೆ 23ನೇ ಸ್ಥಾನ ಗಳಿಸಿದರೆ, ಇದೇ ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಅಂಕಿತಾ 659 ಅಂಕ ಗಳಿಸಿ 22ನೇ ಸ್ಥಾನ ಪಡೆದರು.
ಪುರುಷರ ತಂಡ ವಿಭಾಗದಲ್ಲಿ ಧೀರಜ್ ಬೊಮ್ಮದೇವರ ಅದ್ಭುತ ಪ್ರದರ್ಶನ ನೀಡಿ 658 ಅಂಕದೊಂದಿಗೆ 4ನೇ ಸ್ಥಾನ ಪಡೆದು ಗಮನ ಸೆಳೆದರು, ತರುಣ್ ದೀಪ್ ರೈ 674 ಅಂಕದೊಂದಿಗೆ 14ನೇ ಸ್ಥಾನ ಪಡೆದರೆ, ಪ್ರವೀಣ್ ಜಾಧವ್ 658 ಅಂಕದೊಂದಿಗೆ 39ನೇ ಸ್ಥಾನ ಗಳಿಸಿದರು.