ಅಭಿಮಾನಿಗಳ ದಾಂಧಲೆಯಿಂದ ಅಡೆತಡೆಗಳ ನಡುವೆ 4 ಗಂಟೆಗಳ ಸುದೀರ್ಘ ಕಾಲ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಮೊದಲ ಫುಟ್ಬಾಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡ ಮೊದಲ ಪಂದ್ಯದಲ್ಲೇ ಸೋಲಿನ ಆಘಾತಕ್ಕೆ ಒಳಗಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 1-2 ಗೋಲುಗಳಿಂದ ಮೊರಾಕ್ಕೊ ವಿರುದ್ಧ ಆಘಾತ ಅನುಭವಿಸಿತು.
ಪಂದ್ಯ ಆರಂಭಗೊಂಡ 16 ನಿಮಿಷದಲ್ಲಿಯೇ ಅಭಿಮಾನಿಗಳು ಬಾಟಲಿಗಳನ್ನು ಮೈದಾನಕ್ಕೆ ಎಸೆದಿದ್ದರಿಂದ ಪಂದ್ಯ ನಿಲ್ಲಿಸಲಾಯಿತು. ಸುಮಾರು 2 ಗಂಟೆಗಳ ನಂತರ ಪ್ರೇಕ್ಷಕರನ್ನು ಹೊರಗೆ ಕಳುಹಿಸಿದ ನಂತರ ಖಾಲಿ ಮೈದಾನದಲ್ಲಿ ಪಂದ್ಯ ಪುನರಾರಂಭಿಸಲಾಯಿತು.
ಅರ್ಜೆಂಟೀನಾ ತಂಡ 2204 ಮತ್ತು 2008ರ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಅರ್ಜೆಂಟೀನಾ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕೋಪಾ ಅಮೆರಿಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಹಾಟ್ ಫೇವರಿಟ್ ಆಗಿ ಕಣಕ್ಕಿಳಿದ ಅರ್ಜೆಂಟೀನಾ ಮೊದಲ ಪಂದ್ಯದಲ್ಲಿ ಆಘಾತ ಅನುಭವಿಸಿತು.
ಅರ್ಜೆಂಟೀನಾ ಕೋಚ್ ಪಂದ್ಯದ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಂದ್ಯದ ಆಯೋಜನೆ ಕುರಿತು ಫೀಫಾಗೆ ದೂರು ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.