Thursday, November 21, 2024
Google search engine
Homeತಾಜಾ ಸುದ್ದಿಸನಾತನ ಧರ್ಮ ರಕ್ಷಣಾ ಘಟಕ ರಚಿಸಿದ ಪವನ್ ಕಲ್ಯಾಣ್ ಜನಸೇನಾ ಪಕ್ಷ!

ಸನಾತನ ಧರ್ಮ ರಕ್ಷಣಾ ಘಟಕ ರಚಿಸಿದ ಪವನ್ ಕಲ್ಯಾಣ್ ಜನಸೇನಾ ಪಕ್ಷ!

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸನಾತನ ಧರ್ಮ ರಕ್ಷಿಸಲು ಜನಸೇನಾ ಪಕ್ಷದ (ಜೆಎಸ್‌ಪಿ) ‘ನರಸಿಂಹ ವಾರಾಹಿ ಬ್ರಿಗೇಡ್’ ಘಟಕವನ್ನು ರಚಿಸಿದ್ದಾರೆ.

ಜಗನ್ನಾಥಪುರ ಗ್ರಾಮದಲ್ಲಿ ಶನಿವಾರ ನಡೆದ ‘ದೀಪಂ-2’ ಉಚಿತ ಅಡುಗೆ ಅನಿಲ ಸಿಲಿಂಡರ್ ಯೋಜನೆ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಜನಸೇನಾ ಪಕ್ಷ ನರಸಿಂಹ ವಾರಾಹಿ ಎಂಬ ಸನಾತನ ಧರ್ಮದ ರಕ್ಷಣೆಯ ಬ್ರಿಗೇಡ್ ಸ್ಥಾಪಿಸಿದ್ದೇನೆ ಎಂದು ಘೋಷಿಸಿದ್ದಾರೆ.

ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ, ಆದರೆ ನನ್ನ ನಂಬಿಕೆಯಲ್ಲಿ ನಾನು ದೃಢವಾಗಿರುತ್ತೇನೆ, ಸಾಮಾಜಿಕ ಜಾಲತಾಣಗಳಲ್ಲಿ ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ದೀಪಂ-2 ಯೋಜನೆ ಮೂಲಕ ರಾಜ್ಯದ 1,08,39,286 ಅರ್ಹ ಫಲಾನುಭವಿಗಳಿಗೆ ಪ್ರತಿ ವರ್ಷ 2,684 ಕೋಟಿ ರೂ.ನಂತೆ 3 ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುತ್ತಿದ್ದೇವೆ. 5 ವರ್ಷಗಳಲ್ಲಿ, ಇದು 13,425 ಕೋಟಿ ರೂ. ಕಲ್ಯಾಣಕ್ಕೆ ಮೀಸಲಿಟ್ಟಿದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments