ಟಿ-20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರೂ ತಲೆಕೆಡಿಸಿಕೊಳ್ಳದೇ ಅಮೆರಿಕದಲ್ಲಿ ಮೋಜು ಮಾಡುತ್ತಿರುವ ಪಾಕಿಸ್ತಾನ ಕ್ರಿಕೆಟಿಗರ ರಜೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ರದ್ದುಗೊಳಿಸಿದೆ.
ಟಿ-20 ವಿಶ್ವಕಪ್ ನಲ್ಲಿ ಆರಂಭಿಕ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ ತಂಡ ತವರಿಗೆ ಮರಳದೇ ರಜೆ ಕಳೆಯಲು ಅಮೆರಿಕಕ್ಕೆ ತೆರಳಿತ್ತು. ಆದರೆ ಆಟಗಾರರ ಐಷಾರಾಮಿ ಅಭಿಮಾನಿಗಳ ಕಣ್ಣು ಕುಕ್ಕಿದ್ದುಮ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪಾಕಿಸ್ತಾನದ 17 ಆಟಗಾರರು ಹಾಗೂ 17 ತಂಡದ ಸಿಬ್ಬಂದಿ ಇದ್ದಾರೆ. ಆದರೆ ಅಮೆರಿಕದಲ್ಲಿ ನಿಮಗೆ 60 ಕೊಠಡಿ ಬುಕ್ ಮಾಡಲಾಗಿದೆಯಂತೆ. ಹೌದಾ ಎಂದು ಅಭಿಮಾನಿಯೊಬ್ಬರು ಜೋಕ್ ಮಾಡಿದ್ದರು. ಈ ಹಾಸ್ಯ ಪಾಕಿಸ್ತಾನ ಅಟಗಾರರಿಗೆ ದುಬಾರಿ ಆಗಿದೆ.
ಸಾಮಾಜಿ ಜಾಲತಾಣದಲ್ಲಿ ಈ ಹಾಸ್ಯವನ್ನೇ ಇಟ್ಟುಕೊಂಡು ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕ್ರಿಕೆಟಿಗರ ರಜೆಯನ್ನು ಕೂಡಲೇ ರದ್ದುಗೊಳಿಸಿದ್ದು, ತವರಿಗೆ ಮರಳುವಂತೆ ಸೂಚಿಸಲಾಗಿದೆ.
ಪಾಕಿಸ್ತಾನ ಕ್ರಿಕೆಟಿಗರು ನಾವು ಇಲ್ಲಿ ಕ್ರಿಕೆಟ್ ಕೆಲಸದ ಮೇಲೆ ಬಂದಿದ್ದೇವೆ ಎಂದು ಅನ್ನಿಸುತ್ತಿಲ್ಲ. ಬದಲಾಗಿ ರಜೆ ಅನುಭವಿಸಲು ಬಂದಿದ್ದೇವೆ ಎಂದು ಭಾವಿಸಿದ್ದೇವೆ. ಅಷ್ಟು ಎಂಜಾಯ್ ಮಾಡುತ್ತಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟಿಗನೊಬ್ಬ ಹೇಳಿಕೆ ನೀಡಿದ ವೀಡಿಯೋ ಕೂಡ ವೈರಲ್ ಆಗಿತ್ತು.