ಪಾಕಿಸ್ತಾನದ ಸಾಕಷ್ಟು ಕಳೆದುಕೊಂಡರೂ ಇತಿಹಾಸದಿಂದ ಇನ್ನೂ ಯಾವುದೇ ಪಾಠ ಕಲಿತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಪಾಕಿಸ್ತಾನ ಯಾವಾಗೆಲ್ಲಾ ತಪ್ಪು ಹೆಜ್ಜೆ ಇಟ್ಟಿದೆ. ಅವಾಗಲೇ ಸೋಲುಂಡಿದೆ. ಆದರೂ ಇತಿಹಾಸದಿಂದ ಪಾಠ ಕಲಿಯದೇ ಈಗಲೂ ಭಯೋತ್ಪಾದನೆಯನ್ನು ಪ್ರಚೋದಿಸುತ್ತಲೇ ಇದೆ ಎಂದರು.
ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ತ್ಯಾಗವನ್ನು ದೇಶ ಯಾವತ್ತೂ ಬರೆಯುವುದಿಲ್ಲ. ದೇಶ ರಕ್ಷಣೆಗಾಗಿ ಅವರ ಕೊಡುಗೆ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿಯೇ ಕಾರ್ಗಿಲ್ ದಿವಸ್ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
1999 ಜುಲೈ 26ರಂದು ಪಾಕಿಸ್ತಾನ ಸೈನಿಕರನ್ನು ಹೊಡೆದೊಡಿಸಿ ಕಾರ್ಗಿಲ್ ವಶಪಡಿಸಿಕೊಂಡಿದ್ದನ್ನು ಅಧಿಕೃತವಾಗಿ `ಕಾರ್ಗಿಲ್ ವಿಜಯ್’ ಎಂದು ಘೋಷಿಸಲಾಗಿತ್ತು.