ಕೊಲೆ, ಸುಲಿಗೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಫಾನ್ಸ್ ಪೇಜ್ ಮೂಲಕ ಸಾವಿರಾರು ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ರೌಡಿ ಶೀಟರ್ ಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.
ರೌಡಿ ಶೀಟರ್ ಆಗಿದ್ದರೂ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂಗಳಲ್ಲಿ ಫ್ಯಾನ್ಸ್ ಪೇಜ್ ತೆರೆದು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿಕೊಂಡು ಸಾವಿರಾರು ಪೇಜ್ ಫಾಲೋವರ್ಸ್ ಹೊಂದಿರುವವರಿಗೆ ಎಚ್ಚರಿಕೆ ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ರೌಡಿ ಶೀಟರ್ ಗಳು ಕೂಡಲೇ ತಮ್ಮ ಫ್ಯಾನ್ ಫಾಲೋಯಿಂಗ್ ಪೇಸ್ ಗಳನ್ನು ರದ್ದು ಮಾಡಬೇಕು. ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಎಂದೆಲ್ಲಾ ಭರವಸೆಗಳನ್ನು ನೀಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಲಿದ್ದಾರೆ.
ರೌಡಿ ಶೀಟರ್ ಗಳು ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ತೆರೆದು ಸಾವಿರಾರು ಫಾಲೋವರ್ಸ್ ಹೊಂದಿರುವುದು ಆಘಾತಕಾರಿ ಬೆಳವಣಿಗೆ ಆಗಿದೆ. ಅಕ್ರಮ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು, ಅಪರಾಧ ಪ್ರಕರಣಗಳಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಹೆಚ್ಚಾಗಿದೆ.
ರೌಡಿ ಶೀಟರ್ ಗಳು ತಮ್ಮ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಿರುವುದು, ಮದುವೆ ಮುಂತಾದ ಸಮಾರಂಭಗಳಲ್ಲಿ ಭಾಗಿಯಾಗಿರುವುದು ಸೇರಿದಂತೆ ಕಾರ್ಯಕ್ರಮಗಳ ಫೋಟೊ, ವೀಡಿಯೊ ಅಲ್ಲದೇ ರೀಲ್ಸ್ ಗಳನ್ನು ಮಾಡಿ ಫ್ಯಾನ್ಸ್ ಫಾಲೋಯಿಂಗ್ ಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇದು ಮುಂದೆ ಅಪರಾಧ ಪ್ರಕರಣಗಳಿಗೆ ಮೂಲ ಆಗಬಹುದು ಎಂದು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಫ್ಯಾನ್ಸ್ ಫಾಲೋಯಿಂಗ್ ಪೇಜ್ ಹೊಂದಿರುವ ರೌಡಿ ಶೀಟರ್ ಗಳನ್ನು ಕರೆದು ಬುದ್ದಿ ಹೇಳಿ ಕಳುಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಾನ್ಸ್ ಫಾಲೋಯಿಂಗ್ ಮೂಲಕ ರೌಡಿ ಶೀಟರ್ ಗಳು ರಾಜಕೀಯ ನಂಟು ಹೆಚ್ಚಿಸಿಕೊಂಡು ಮುಂದೊಂದು ದಿನ ರಾಜಕೀಯ ಪ್ರವೇಶಕ್ಕು ಯತ್ನಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಲೆಂಟ್ ಸುನೀಲ್, ನಾಗಣ್ಣ ಮುಂತಾದ ರೌಡಿ ಶೀಟರ್ ಗಳ ಫ್ಯಾನ್ಸ್ ಫಾಲೋಯಿಂಗ್ ಪೇಜ್ ಗಳ ಪಟ್ಟಿಯನ್ನು ಬೆಂಗಳೂರು ಪೊಲೀಸರು ಸಿದ್ಧಪಡಿಸಿದ್ದಾರೆ.
ನಟ ದರ್ಶನ್ ಸೇರಿದಂತೆ ಸಿನಿಮಾ ನಟರಂತೆ ಡಿ ಬಾಸ್ ಹೋಲುವಂತೆ ಎನ್ ಬಾಸ್, ಎಸ್ ಬಾಸ್, ಬಾಸ್ ಹೀಗೆ ನಾನಾ ಹೆಸರುಗಳಲ್ಲಿ ರೌಡಿ ಶೀಟರ್ ಗಳು ಫ್ಯಾನ್ ಫಾಲೋಯಿಂಗ್ ಪೇಜ್ ಗಳನ್ನು ಹೊಂದಿದ್ದಾರೆ.