Wednesday, December 24, 2025
Google search engine
Homeರಾಜಕೀಯಸರ್ವಪಕ್ಷ ಸಭೆ ನಂತರ ಕದನ ವಿರಾಮ ಘೋಷಿಸಬೇಕಿತ್ತು: ಸಿಎಂ ಸಿದ್ದರಾಮಯ್ಯ ಅಭಿಮತ

ಸರ್ವಪಕ್ಷ ಸಭೆ ನಂತರ ಕದನ ವಿರಾಮ ಘೋಷಿಸಬೇಕಿತ್ತು: ಸಿಎಂ ಸಿದ್ದರಾಮಯ್ಯ ಅಭಿಮತ

ಮೈಸೂರು: ಸರ್ವಪಕ್ಷ ಸಭೆ ಹಾಗೂ ಸಂಸತ್ ಸದಸ್ಯರ ಸಭೆ ಮಾಡಿ ಕದನ ವಿರಾಮ ಘೋಷಣೆ ಮಾಡಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಎಚ್.ಡಿ.ಕೋಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ – ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ವಿಚಾರ ಸಂಬಂಧ ಕೇಂದ್ರದ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ. ಸಭೆ ಬಳಿಕ ಈ ಪ್ರತಿಕ್ರಯಿಸುತ್ತೇನೆ ಎಂದರು.

ಇಂದಿರಾ ಗಾಂಧಿ ರೀತಿ ಯುದ್ಧ ಮಾಡಬೇಕು ಎಂಬ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇಂದಿರಾ ಗಾಂಧಿ ಸಮಯದ ಯುದ್ಧ ಆಗಿ ತುಂಬಾ ವರ್ಷಗಳೇ ಆಗಿವೆ. ಸದ್ಯಕ್ಕೆ ಈಗ ನಾನು ಆ ಬಗ್ಗೆ ಏನು ಹೇಳಲ್ಲ. ಎರಡು ದೇಶಗಳ ಡಿಜಿಎಂಗಳು ಇಂದು ಸಭೆ ಮಾಡುತ್ತಿದ್ದಾರೆ. ಸಭೆಯಲ್ಲಿ ಏನು ತೀರ್ಮಾನ ಮಾಡುತ್ತಾರೆ ಮಾಡಲಿ. ಆ ಬಳಿಕ ಉತ್ತರಿಸುವೆ ಎಂದು ಅವರು ಹೇಳಿದರು.

ಕದನ ವಿರಾಮ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ವಿಚಾರ ಕುರಿತು ಕೇಳಿದ ಪ್ರಶ್ನೆಗೆ, ಆ ಬಗ್ಗೆ ನಾನು ಮಾತನಾಡುವುದಿಲ್ಲ. ಸದ್ಯಕ್ಕೆ ಕದನ ವಿರಾಮ ಘೋಷಣೆ ಆಗಿದೆ . ಅದನ್ನು ಸ್ವಾಗತ ಮಾಡಿದ್ದೇನೆ. ಯುದ್ದದ ಬಗ್ಗೆ ನಾನೇನೂ ಮಾತನಾಡಲ್ಲ ಎಂದರು.

ಎರಡು ವರ್ಷದ ಸಂಭ್ರಮಾಚರಣೆ ಸಂಬಂಧ ಸಂಜೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ತೀರ್ಮಾನದ ಬಳಿಕ ನಿರ್ಧಾರವಾಗಲಿದೆ. ರಾಜ್ಯ ಸರ್ಕಾರ ಸಂಭ್ರಮ ಆಚರಣೆಗೆ ಸಿದ್ಧವಾಗಿದೆ‌. ಇನ್ನೂ ನುಡಿದಂತೆ ನಡೆದಿದ್ದೇವೆ ಎಂದು ಪ್ರಶ್ನೆಗೆ ಪ್ರತಿಕ್ರಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments