ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆ. ನಾನು ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಆಗಿ ರೂಪಿಸುವ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ರಾಮನಗರ ಹೆಸರು ಬದಲಾವಣೆ ಮಾಡಿಯೇ ಮಾಡುತ್ತೇನೆ. ಯಾರು ಏನೇ ಮಾಡಿದರೂ ನಾನು ಬಿಡುವುದಿಲ್ಲ ಎಂದರು.
ಇದು ನನ್ನೂರು. ನಾನು ಹುಟ್ಟಿ ಬೆಳೆದ ಊರು. ಯಾರಾದರೂ ಅವರ ಅಪ್ಪ-ಅಮ್ಮನ ಹೆಸರು ಬದಲಿಸಿಕೊಳ್ತಾರಾ? ಬದಲಿಸಿಕೊಳ್ಳಲು ಆಗುತ್ತಾ? ಆಧಾರ್ ಕಾರ್ಡ್ ನಲ್ಲಿ ಮಾಡಿಕೊಳ್ಳಬಹುದು ಅಷ್ಟೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ನಾನು ಎಲ್ಲಿಂದಲೋ ಬಂದವನು ಅಲ್ಲ. ಎಲ್ಲಿಂದಲೋ ಬಂದವರು ಹೆಸರು ಬದಲಿಸಿದ್ದಾರೆ. ನಾವು ಇಲ್ಲಿಯವರೆಗೆ ನಮ್ಮ ಹೆಸರು ಇಟ್ಕೊಬೇಕು ಅಲ್ಲವೇ? ಮಾಜಿ ಪ್ರಧಾನಿಗಳು ಹೋರಾಟ ಮಾಡ್ತೀವಿ ಅಂತ ಹೇಳಿದ್ದಾರೆ. ಆದರೆ ಅವರ ಮಗ ಮಾಡಿದ್ದನ್ನು ನಾವು ಇಲ್ಲಿ ಸರಿಮಾಡುತ್ತಿದ್ದೇವೆ. ಅವರು ಅರ್ಥ ಮಾಡಿಕೊಂಡು ಸರಿಪಡಿಸಬೇಕು ಎಂದು ಡಿಕೆ ಶಿವಕುಮಾರ್ ನುಡಿದರು.


