ಮಹಾರಾಷ್ಟ್ರದಲ್ಲಿ ತಾವೇ ಉದ್ಘಾಟಿಸಿದ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ಕುಸಿತ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಿದ್ದಾರೆ.
3ನೇ ಬಾರಿ ಪ್ರಧಾನಿ ಸ್ಥಾನ ಅಲಂಕರಿಸಿದ ನಂತರ ಮೊದಲ ಬಾರಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಸಿಂಧುಬರ್ಗ್ ನಲ್ಲಿ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆದರೆ ಅನಾವರಣಗೊಂಡ ಕೆಲವೇ ದಿನಗಳಲ್ಲಿ (ಆಗಸ್ಟ್ 26)ಪ್ರತಿಮೆ ಕುಸಿದುಬಿದ್ದಿತ್ತು.
ಶುಕ್ರವಾರ ಪಾಲ್ಗರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿರುವ ಪ್ರಧಾನಿ ಮೋದಿ, ನಮ್ಮ ಪಾಲಿಗೆ ಛತ್ರಪತಿ ಶಿವಾಜಿ ಮಹಾರಾಜ್ ಕೇವಲ ಹೆಸರು ಅಲ್ಲ. ಇವತ್ತು ನಾನು ತಲೆ ಬಾಗಿಸಿ ಶಿವಾಜಿ ಮಹಾರಾಜ್ ಬಳಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಶಿವಾಜಿ ಪ್ರತಿಮೆ ಕುಸಿದಿದ್ದರಿಂದ ಹಲವರ ಭಾವನೆಗಳಿಗೆ ಧಕ್ಕೆಯಾಗಿದೆ. ಇದಕ್ಕಾಗಿ ನಾನು ತಲೆಬಾಗಿ ಕ್ಷಮೆಯಾಚಿಸುತ್ತೇನೆ. ಶಿವಾಜಿ ಕೇವಲ ಹೆಸರಲ್ಲ. ಅವರು ನಮ್ಮ ಆದರ್ಶ ಎಂದು ಮೋದಿ ಹೇಳಿದ್ದಾರೆ.