ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಹಾವು ಕಾಣಿಸಿಕೊಂಡಿದ್ದು, ಉರಗ ತಜ್ಞರ ಮೂಲಕ ಪತ್ತೆ ಹಚ್ಚಿ ಕಾಡಿಗೆ ಬಿಡಲಾಗಿದೆ.
ದೆಹಲಿಯ ಲೋಕಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಹಾವು ಪತ್ತೆಯಾಗಿದ್ದು, ಮೂವರು ಉರಗ ತಜ್ಞರು ಸ್ಥಳಕ್ಕೆ ತೆರಳಿ ಹಾವನ್ನು ಪತ್ತೆ ಹಚ್ಚಿ ಕಾಡಿಗೆ ಬಿಟ್ಟಿದ್ದಾರೆ.
ಪ್ರಧಾನಿ ನಿವಾಸದಲ್ಲಿ ಕಂಡುಬಂದ ಹಾವು ರ್ಯಾಟ್ ಸ್ನೇಹ್ ಎಂದು ಹೇಳಲಾಗುವ ಹಾವಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಹಾವುಗಳು ಹೊರಗೆ ಬರುತ್ತವೆ. ಹಾವುಗಳು ಬೆಚ್ಚಗಿನ ಜಾಗ ಹುಡುಕೊಂಡು ಬರುವುದರಿಂದ ಕಾಡು ಅಥವಾ ಗಿಡ-ಮರಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಉರಗ ತಜ್ಞರು ತಿಳಿಸಿದ್ದಾರೆ.