Thursday, November 21, 2024
Google search engine
Homeಜಿಲ್ಲಾ ಸುದ್ದಿಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿ ಮಠದ `ಸೇವಾರತ್ನ' ಪ್ರಶಸ್ತಿಗೆ ಕನ್ನಡಪರ ಚಿಂತಕ ಪಾಲನೇತ್ರ ಆಯ್ಕೆ

ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿ ಮಠದ `ಸೇವಾರತ್ನ’ ಪ್ರಶಸ್ತಿಗೆ ಕನ್ನಡಪರ ಚಿಂತಕ ಪಾಲನೇತ್ರ ಆಯ್ಕೆ

ಬೆಳಗಾವಿ ಜಿಲ್ಲೆಯ ನಾಗನೂರು ಶ್ರೀರುದ್ರಾಕ್ಷಿ ಮಠದ 2024ರ ಸೇವಾರತ್ನ ಪ್ರಶಸ್ತಿಗೆ ಕನ್ನಡಪರ ಚಿಂತಕ, ಕನ್ನಡ ಹೋರಾಟಗಾರ, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ ಆಯ್ಕೆಯಾಗಿದ್ದಾರೆ.

ಕರ್ನಾಟಕ ಏಕೀಕರಣ ಮತ್ತು ಭಾರತ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ನಾಗನೂರು ಶ್ರೀ ರುದ್ರಾಕ್ಷಿಮಠದ ಶತಾಯುಷಿ ಡಾ. ಶಿವಬಸವ ಮಹಾಸ್ವಾಮಿಗಳವರ ನೆನಪಿನಲ್ಲಿ ನಾಡಿನ ಸಾದಕರಿಗೆ ಕೊಡಮಾಡುವ ಸೇವಾರತ್ನ ಪ್ರಶಸ್ತಿಯ ಫಲಕದೊಂದಿಗೆ 25,000 ರೂ.ಗಳನ್ನು ನೀಡಿ ಗೌರವಿಸಲಾಗುವುದು.

ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾದ ಪಾಲನೇತ್ರ ಅವರನ್ನು ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಹಿತರಕ್ಷಣೆಗಾಗಿ ನಡೆದಿರುವ ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಪಾಲನೇತ್ರ ಕನ್ನಡಪರ ಚಿಂತಕರಾಗಿ, ಪರಿಚಾರಕರಾಗಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪಾಲನೇತ್ರ ಅವರನ್ನು ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಕನ್ನಡ ಪರ ಹೋರಾಟಗಾರರಿಗೆ ಸಿಕ್ಕ ಗೌರವ.

ಡಿಸೆಂಬರ್ 8 ರಂದು ಡಾ. ಶಿವಬಸವ ಮಹಾಸ್ವಾಮಿಗಳ ಜಯಂತಿ ಸಮಾರಂಭದಲ್ಲಿ ಸೇವಾರತ್ನ ಪ್ರಶಸ್ತಿಯನ್ನು ಪಾಲನೇತ್ರರವರು ಸ್ವೀಕರಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments