ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ರಾಹುಲ್ ದ್ರಾವಿಡ್ ನಿರ್ಗಮಿಸಲಿದ್ದು, ನೂತನ ಕೋಚ್ ಆಯ್ಕೆಯ ಹುಡುಕಾಟವನ್ನು ಬಿಸಿಸಿಐ ಆರಂಭಿಸಿದೆ.
ಬಿಸಿಸಿಐ ಕಾರ್ಯದರ್ಶಿ ಜೈ ಶಾ ಶೀಘ್ರದಲ್ಲೇ ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನದ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಜಾಹಿರಾತು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಟಿ-20 ವಿಶ್ವಕಪ್ ನಂತರ ಕೋಚ್ ಸ್ಥಾನದಿಂದ ನಿರ್ಗಮಿಸುವ ಸಾಧ್ಯತೆ ಇದೆ.
ಭಾರತ ತಂಡದ ಕೋಚ್ ಸ್ಥಾನಕ್ಕೆ ಶೀಘ್ರವೇ ಅರ್ಜಿ ಕರೆಯಲಿದ್ದೇವೆ. ರಾಹುಲ್ ದ್ರಾವಿಡ್ ಕೂಡ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಜೈ ಶಾ ಹೇಳಿದ್ದಾರೆ.
ಪ್ರಸ್ತುತ ತಂಡದ ಕೋಚ್ ಆಗಿರುವ ದ್ರಾವಿಡ್ ಮತ್ತೆ ಅರ್ಜಿ ಸಲ್ಲಿಸುವುದು ಎಷ್ಟು ಸರಿ? ಅವರ ಕಾರ್ಯವೈಖರಿ ತೃಪ್ತಿ ನೀಡಿದ್ದರೆ ಗುತ್ತಿಗೆ ಒಪ್ಪಂದವನ್ನು ಮುಂದುವರಿಸಬಹುದು ಅಲ್ಲವೇ ಎಂಬ ಪ್ರಶ್ನೆಗಳು ಕಾಡತೊಡಗಿವೆ.
2023 ನವೆಂಬರ್ ನಲ್ಲಿ ರಾಹುಲ್ ದ್ರಾವಿಡ್ ಕೋಚ್ ಸ್ಥಾನದಲ್ಲಿ ತನ್ನನ್ನು ಹಾಗೂ ಕೋಚ್ ಸಹಾಯಕ ಸಿಬ್ಬಂದಿಯನ್ನು ಮುಂದುವರಿಸಲು ಮನವಿ ಮಾಡಿದ್ದರು. ನೂತನ ಗುತ್ತಿಗೆ ಅವಧಿ 2024 ಜೂನ್ ಗೆ ಅಂತ್ಯಗೊಳ್ಳಲಿದೆ.