ರಾಷ್ಟ್ರಪತಿ ಭವನದ ದರ್ಬಾಲ್ ಹಾಲ್ ಮತ್ತು ಅಶೋಕ ಹಾಲ್ ಗಳಿಗೆ ಮರು ನಾಮಕರಣ ಮಾಡಲಾಗಿದೆ. ಈ ಮೂಲಕ ಹಿಂದಿನ ರಾಷ್ಟ್ರಪತಿಗಳಿಂದ ಆರಂಭವಾದ ಸ್ಥಳಗಳ ಮರುನಾಮಪಕರಣ ಪ್ರಕ್ರಿಯೆ ಮುಂದುವರಿದಿದೆ.
ರಾಷ್ಟ್ರಪತಿ ಭವನದ ದರ್ಬಾಲ್ ಹಾಲ್ ಮತ್ತು ಅಶೋಕ ಹಾಲ್ ಗಳಿಗೆ `ಗಣತಂತ್ರ ಮಂಟಪ್’ ಮತ್ತು ಅಶೋಕ ಮಂಟಪ್ ಎಂದು ಮರುನಾಮಕರಣ ಮಾಡಲಾಗಿದೆ.
ರಾಷ್ಟ್ರಪತಿ ಭವನ ಪ್ರಜಾತಂತ್ರ ವ್ಯವಸ್ಥೆಯ ಪ್ರತೀಕವಾಗಿದ್ದು, ಇಲ್ಲಿ ಯಾವುದೇ ವ್ಯಕ್ತಿ ಹೆಸರು ಉಲ್ಲೇಖಿಸುವುದು ಸರಿಯಲ್ಲ. ಆದ್ದರಿಂದ ಗಣರಾಜ್ಯ ವ್ಯವಸ್ಥೆಯ ಹೆಸರಿಗೆ ಹೊಂದುವಂತೆ ಬದಲಾವಣೆ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.
ಜನರಿಗೆ ಮತ್ತಷ್ಟು ಹತ್ತಿರವಾಗಲು ರಾಷ್ಟ್ರಪತಿ ಭವನದಲ್ಲಿ ಬದಲಾಣೆಗಳ ಪ್ರಕ್ರಿಯೆ ಮುಂದುವರಿಯಲಿದೆ. ರಾಷ್ಟ್ರಪತಿ ಭವನ ದೇಶದ ಸಂಸ್ಕೃತಿ ಗೌರವ ಎತ್ತಿ ಹಿಡಿಯಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ದರ್ಬಾರ್ ಹಾಲ್ ನಲ್ಲಿ ಸಾಮಾನ್ಯವಾಗಿ ರಾಷ್ಟ್ರೀಯ ಪ್ರಶಸ್ತಿ ವಿತರಣೆಯಂತಹ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದರ್ಬಾರ್ ಎಂಬ ಪದ ರಾಜರು ಮತ್ತು ಬ್ರಿಟಿಷರ ಆಡಳಿತದಲ್ಲಿ ಚಾಲ್ತಿಯಲ್ಲಿದ್ದ ಪದಗಳಾಗಿದ್ದು, ಇವುಗಳನ್ನು ಬಳಸದೇ ಇರಲು ನಿರ್ಧರಿಸಲಾಗಿದೆ.
ಅಶೋಕ ಹಾಲ್ ರಾಷ್ಟ್ರಪತಿ ಭವನದ ಬಾಲ್ ರೂಮ್ ಆಗಿದ್ದು, ತ್ಯಾಗ ಬಲಿದಾನಗಳ ಸಂಕೇತವಾಗಿ ಅಶೋಕನ ಹೆಸರು ಬಳಸಲಾಗುತ್ತಿದ್ದು, ಅಶೋಕ ಹೆಸರು ಉಳಿಸಿಕೊಂಡಿದ್ದು, ಹಾಲ್ ಬದಲು ಮಂಟಪ ಎಂದು ಬದಲಿಸಲಾಗಿದೆ.