ದೇಶದಲ್ಲಿ ಹಣಕಾಸು ವಹಿವಾಟುಗಳನ್ನು ಮತ್ತಷ್ಟು ಸುಗಮ ಹಾಗೂ ತ್ವರಿತಗೊಳಿಸುವ ಉದ್ದೇಶದಿಂದ ಇನ್ನು ಮುಂದೆ ಬ್ಯಾಂಕ್ ಚೆಕ್ಗಳನ್ನು ಕೆಲವೇ ಗಂಟೆಗಳಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೆ ತರುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪ್ರಸ್ತುತ, ಚೆಕ್ ಟ್ರಂಕೇಶನ್ ಸಿಸ್ಟಮ್ (ಸಿಟಿಎಸ್) ಮೂಲಕ ಕಂತುಗಳಲ್ಲಿ ಚೆಕ್ಗಳ ವಿಲೆ ನಡೆಯುತ್ತಿದೆ. ಈ ವ್ಯವಸ್ಥೆಯಲ್ಲಿ ಚೆಕ್ ವಿಲೆಗ್ಗೆ ಎರಡು ಕೆಲಸದ ದಿನ ಬೇಕಾಗುತ್ತದೆ.
ಇನ್ನು ಮುಂದೆ ಸಿಟಿಎಸ್ನಲ್ಲಿ ’ಆನ್-ರಿಯಲೈಸೇಶನ್-ಸೆಟ್ಲಮೆಂಟ್’ ವ್ಯವಸ್ಥೆಯನ್ನು ಅಳವಡಿಸಿ ನಿರಂತರವಾಗಿ ಚೆಕ್ ಕ್ಲಿಯರಿಂಗ್ ಅನ್ನು ಪರಿಚಯಿಸುವ ಮೂಲಕ ವಿಲೆವಾರಿ ಸಮಯವನ್ನು ತಗ್ಗಿಸಲು ಪ್ರಸ್ತಾಪಿಸಲಾಗಿದೆ ಎಂದು ದಾಸ್ ವಿವರಿಸಿದರು.
ಅಂದರೆ ಇನ್ನು ಮುಂದೆ ಚೆಕ್ಗಳನ್ನು ಬ್ಯಾಂಕಿಗೆ ಹಾಕಿದ ಕೆಲವೇ ಗಂಟೆಗಳಲ್ಲಿ ಅವು ವಿಲೇವಾರಿ ಆಗಲಿವೆ. ಇದು ಚೆಕ್ ಪಾವತಿಯನ್ನು ವೇಗಗೊಳಿಸುತ್ತದೆ ಮತ್ತು ಪಾವತಿದಾರ ಮತ್ತು ಪಾವತಿ ಪಡೆಯುವವ ಇಬ್ಬರಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಆರ್ ಬಿಐ ಗವರ್ನರ್ ಹೇಳಿದ್ದಾರೆ.