ಸತತ 6 ಗೆಲುವಿನೊಂದಿಗೆ ಐಪಿಎಲ್ ಪ್ಲೇಆಫ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಒಂದು ಬಾರಿ ಪ್ರಶಸ್ತಿ ಗೆಲ್ಲದೇ ಇದ್ದರೂ ಅತೀ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ದಾಖಲೆ ಬರೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಬಾರಿ ಐಪಿಎಲ್ ನಲ್ಲಿ ಪ್ಲೇಆಫ್ ಪ್ರವೇಶಿಸಿದೆ. ಈ ಮೂಲಕ ಅತೀ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ಹೆಗ್ಗಳಿಕೆಗೆ ಆರ್ ಸಿಬಿ ಪಾತ್ರವಾಗಿದೆ.
ಆರ್ ಸಿಬಿ ಒಂದು ಬಾರಿ ಫೈನಲ್ ಸೇರಿದಂತೆ ಇದುವರೆಗೆ 14 ಬಾರಿ ಪ್ಲೇಆಫ್ ಸುತ್ತಿನಲ್ಲಿ ಆಡಿ ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ ಅತೀ ಕಡಿಮೆ ಬಾರಿ ಪ್ಲೇಆಫ್ ಪ್ರವೇಶಿಸಿದ್ದು, ಒಂದು ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ.
ಟೂರ್ನಿಯ ಆರಂಭದ 7 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಆರ್ ಸಿಬಿ ಸತತ 6 ಗೆಲುವು ಕಂಡಿತು. ಅದರಲ್ಲೂ 5 ಬಾರಿಯ ಚಾಂಪಿಯನ್ ಹಾಗೂ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಗಳ ಅಮೋಘ ಜಯದೊಂದಿಗೆ 15ನೇ ಬಾರಿ ಪ್ಲೇಆಫ್ ಪ್ರವೇಶಿಸಿ ತನ್ನ ದಾಖಲೆ ಉಳಿಸಿಕೊಂಡಿದೆ.
ವಿಶೇಷ ಅಂದರೆ ಈ ಬಾರಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿದರೆ ಪ್ಲೇಆಫ್ ಪ್ರವೇಶಿಸಿರುವ ತಂಡಗಳೆಲ್ಲಾ ಅತೀ ಹೆಚ್ಚು ಬಾರಿ ಪ್ಲೇಆಫ್ ಪ್ರವೇಶಿಸಿದ ದಾಖಲೆ ಹೊಂದಿರುವ ತಂಡಗಳೇ ಆಗಿವೆ.
ಆರ್ ಸಿಬಿ 14 ಬಾರಿ ಪ್ಲೇಆಫ್ ಪ್ರವೇಶಿಸಿದ್ದು, 5ರಲ್ಲಿ ಜಯ ಹಾಗೂ 9 ಸೋಲು ಕಂಡಿದೆ. ಅತೀ ಹೆಚ್ಚು ಪ್ಲೇಆಫ್ ಪ್ರವೇಶಿಸಿರುವ ಎರಡನೇ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ 13 ಪಂದ್ಯಗಳಲ್ಲಿ 8 ಜಯ ಹಾಗೂ 5 ಸೋಲುಂಡಿದ್ದು, ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ 5 ಬಾರಿ ಸೇರಿದಂತೆ 11 ಬಾರಿ ಪ್ಲೇಆಫ್ ಪ್ರವೇಶಿಸಿದ್ದು, 5 ಜಯ ಹಾಗೂ 6 ಸೋಲು ಕಂಡಿದೆ. 2016ರಲ್ಲಿ ಪ್ರಶಸ್ತಿ ಗೆದ್ದಿದ್ದರೆ, ಒಂದು ಬಾರಿ ಫೈನಲ್ ನಲ್ಲಿ ಸೋಲುಂಡಿದೆ.
ರಾಜಸ್ಥಾನ್ ರಾಯಲ್ಸ್ 9 ಬಾರಿ ಪ್ಲೇಆಫ್ ಪ್ರವೇಶಿಸಿದ್ದು, 4 ಜಯ ಹಾಗೂ 5 ಬಾರಿ ಸೋಲುಂಡಿದೆ. ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ನಂತರ ರಾಜಸ್ಥಾನ್ ಒಂದು ಬಾರಿ ಮಾತ್ರ ಫೈನಲ್ ಪ್ರವೇಶಿಸಿದೆ.