ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ.
287– ರನ್ ಗಳಿಸುವ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ನಲ್ಲಿ ದಾಖಲಿಸಿದ ಗರಿಷ್ಠ ಮೊತ್ತದ ತನ್ನದೇ ದಾಖಲೆ ಮುರಿದಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ 277/3 ದಾಖಲಿಸಿತ್ತು.
287/3– ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಗರಿಷ್ಠ ಮೊತ್ತವಾಗಿದೆ. ನೇಪಾಳ ಏಷ್ಯನ್ ಗೇಮ್ಸ್ ನಲ್ಲಿ ಮಂಗೊಲಿಯಾ ವಿರುದ್ಧ 314/3 ರನ್ ಗಳಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ.
549– ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಆರ್ ಸಿಬಿ- ಎಸ್ ಆರ್ ಎಚ್ ಗಳಿಸಿದ ಒಟ್ಟಾರೆ ಮೊತ್ತವಾಗಿದೆ. ಇದಕ್ಕೂ ಮುನ್ನ ಎಸ್ ಆರ್ ಎಚ್-ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ 523 ರನ್ ಬಂದಿತ್ತು.
38– ಸಿಕ್ಸರ್ ಒಂದೇ ಪಂದ್ಯದಲ್ಲಿ ಬಂದ ದಾಖಲೆ ಆರ್ ಸಿಬಿ- ಎಸ್ ಆರ್ ಎಚ್ ಪಾಲಾಗಿದೆ. ಈ ಹಿಂದೆ ಎಸ್ ಆರ್ ಎಚ್- ಮುಂಬೈ ನಡುವಿನ ಪಂದ್ಯದಲ್ಲಿ ಇಷ್ಟೇ ಸಿಕ್ಸರ್ ಗಳು ಬಂದಿದ್ದವು.
220– ಸಿಕ್ಸರ್ ಸಿಡಿಸಿದ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ತನ್ನದೇ ದಾಖಲೆ ಮುರಿದಿದೆ. ಬೆಂಗಳೂರಿನಲ್ಲಿ ಮುಂಬೈ ವಿರುದ್ಧ ಆರ್ ಸಿಬಿ 2013ರಲ್ಲಿ 21 ಸಿಕ್ಸರ್ ದಾಖಲೆ ಬರೆದಿತ್ತು.
81– ಬೌಂಡರಿ ಬಂದಿರುವುದು ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬೌಂಡರಿ ದಾಖಲೆ ಸರಿಗಟ್ಟಿತು. 2023ರಲ್ಲಿ ಸೆಂಚೂರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ದಾಖಲಾಗಿತ್ತು.
39– ಎಸೆತಗಳಲ್ಲಿ ಟ್ರಾವಿಸ್ ಹೆಡ್ ಶತಕ ಸಿಡಿಸಿರುವುದು ಐಪಿಎಲ್ ನಲ್ಲಿ ದಾಖಲಾದ ಅತ್ಯಂತ ವೇಗದ 4ನೇ ಶತಕವಾಗಿದೆ. ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.