ಮುಂದಿನ 2-3 ದಿನಗಳಲ್ಲಿ ಬಿಸಿಗಾಳಿ ಆರ್ಭಟ ಹೆಚ್ಚಾಗಲಿದ್ದು, 45 ಡಿಗ್ರಿ ಉಷ್ಣಾಂಶಕ್ಕೆ ಏರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹವಮಾನ ಇಲಾಖೆ 4 ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಬಿಸಿಗಾಳಿ ಪ್ರಭಾವ ಹೆಚ್ಚಾಗಲಿದ್ದು, ಜನರು ಮನೆಯಿಂದ ಹೊರಗೆ ಬರುವ ಮುನ್ನ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪಶ್ಚಿಮ ಭಾರತದಲ್ಲಿ ಬಿಸಿಗಾಳಿ ಹೆಚ್ಚು ಪ್ರಭಾವ ಬೀರಲಿದೆ. ಮುಂದಿನ 5 ದಿನಗಳಲ್ಲಿ ಇದು ದಕ್ಷಿಣ ಭಾರತದ ರಾಜ್ಯಗಳಿಗೆ ವ್ಯಾಪಿಸಲಿದೆ.
ಆಂಧ್ರಪ್ರದೇಶದ ಕಲ್ಕಿಕುಂಡ ಮತ್ತು ಖಂಡಾಲದಲ್ಲಿ ಗರಿಷ್ಠ 45.6 ಡಿಗ್ರಿ ಸೆಲ್ಸಿಯಸ್ ವರೆಗೂ ಉಷ್ಣಾಂಶ ತಲುಪುವ ಸಾಧ್ಯತೆ ಇದೆ. ಇದು ಸಾಮಾನ್ಯ ಉಷ್ಣಾಂಶಕ್ಕಿಂತ 8 ಡಿಗ್ರಿ ಹೆಚ್ಚಾಗಿದ್ದು, ಜನರು ಬಿಸಿ ತಡೆಯುವುದು ಕಷ್ಟವಾಗಲಿದೆ.
ಕೆಲವು ರಾಜ್ಯಗಳಲ್ಲಿ ಸತತ 20 ದಿನಗಳ ಕಾಲ ಬಿಸಿಗಾಳಿ ಪ್ರಭಾವ ಇರಲಿದೆ. ಪಶ್ಚಿಮ ರಾಜ್ಯಗಳ ನಂತರ ಇದು ದಕ್ಷಿಣ ಭಾರತದ ರಾಜ್ಯಗಳತ್ತ ಸಾಗಲಿದೆ. ಇದು ಮೇ ತಿಂಗಳ ಅಂತ್ಯದವರೆಗೂ ಕಾಡುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ವಿವರಿಸಿದೆ.