ಕಾಂಬೊಡಿಯಾದಲ್ಲಿ ಸೈಬರ್ ವಂಚಕರ ಜಾಲದಲ್ಲಿ ಸಿಕ್ಕಿಬಿದ್ದಿದ್ದ 14 ಭಾರತೀಯರನ್ನು ರಕ್ಷಿಸಲಾಗಿದ್ದು, ತವರಿಗೆ ಮರಳಲು ಕಾಯುತ್ತಿದ್ದಾರೆ.
ಮಾನವ ಕಳ್ಳಸಾಗಾಣೆ ಜಾಲದಲ್ಲಿ ಸಿಕ್ಕಿಬಿದ್ದಿದ್ದ 14 ಮಂದಿಯನ್ನು ಕಾಂಬೊಡಿಯಾದಲ್ಲಿ ಸೈಬರ್ ವಂಚನೆಗೆ ಬಳಸಿಕೊಳ್ಳಲಾಗುತ್ತಿತ್ತು. ಇದೀಗ ರಕ್ಷಿಸಲಾದ ಭಾರತೀಯರು ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ತವರಿಗೆ ಮರಳುವಂತೆ ಮನವಿ ಮಾಡಿದ್ದಾರೆ.
14 ಮಂದಿ ಉತ್ತರ ಪ್ರದೇಶ ಮತ್ತು ಬಿಹಾರದವರು ಎಂದು ಗುರುತಿಸಲಾಗಿದೆ. ಇವರನ್ನು ಕಾಂಬೊರಿಯಾದ ಸ್ಥಳೀಯ ಪೊಲೀಸರು ರಕ್ಷಿಸಿದ್ದು, ಸ್ವಯಂಸೇವಾ ಸಂಘಟನೆಯ ಆಶ್ರಯದಲ್ಲಿ ಇರಿಸಲಾಗಿದೆ.
ಮಾನವ ಕಳ್ಳಸಾಗಾಣೆ ಜಾಲದಲ್ಲಿ ಸಿಲುಕಿರುವ 14 ಮಂದಿಯನ್ನು ರಕ್ಷಿಸಿದ್ದರೂ ಸುಮಾರು 5000ಕ್ಕೂ ಅಧಿಕ ಭಾರತೀಯರ ಕಾಂಬೊಡಿಯಾದಲ್ಲಿ ಸೈಬರ್ ವಂಚಕರ ಜಾಲದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ.