ರಿಷಭ್ ಪಂತ್ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ಚೆನ್ನೈನಲ್ಲಿ ನಡೆಯತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ ನಲ್ಲಿ ರಿಷಭ್ ಪಂತ್ 128 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ (109) ಶತಕ ಸಿಡಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ 6ನೇ ಶತಕದ ಗೌರವಕ್ಕೆ ಪಾತ್ರರಾದರು.
ಮಹೇಂದ್ರ ಸಿಂಗ್ ಧೋನಿ 6 ಶತಕ ಸಿಡಿಸಿ ಅತೀ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಗೆ ಪಾತ್ರರಾಗಿದ್ದರು. ಆದರೆ ರಿಷಭ್ ಪಂತ್ 6 ಶತಕ ಬಾರಿಸಿ ದಾಖಲೆ ಸರಿಗಟ್ಟಿದರೂ ಅತ್ಯಂತ ಕಡಿಮೆ ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದರು.
ಧೋನಿ ಟೆಸ್ಟ್ ನಲ್ಲಿ 6 ಶತಕ ಗಳಿಸಲು 90 ಪಂದ್ಯ 144 ಇನಿಂಗ್ಸ್ ತೆಗೆದುಕೊಂಡರೆ, ರಿಷಭ್ ಪಂತ್ ಕೇವಲ 34 ಟೆಸ್ಟ್, 54 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವೃದ್ಧಿಮಾನ್ ಸಾಹ 54 ಇನಿಂಗ್ಸ್ ಗಳಲ್ಲಿ 3 ಶತಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.