Thursday, November 21, 2024
Google search engine
Homeತಾಜಾ ಸುದ್ದಿಸುಪ್ರೀಂನಲ್ಲಿ ರೋಹಿಣಿ ಸಿಂಧೂರಿ ಬೇಷರತ್ ಕ್ಷಮೆಗೆ ಪಟ್ಟು: ಡಿ.ರೂಪಾಗೆ ಹಿನ್ನಡೆ

ಸುಪ್ರೀಂನಲ್ಲಿ ರೋಹಿಣಿ ಸಿಂಧೂರಿ ಬೇಷರತ್ ಕ್ಷಮೆಗೆ ಪಟ್ಟು: ಡಿ.ರೂಪಾಗೆ ಹಿನ್ನಡೆ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮಧ್ಯಸ್ಥಿಕೆಗೆ ಒಪ್ಪದೇ ಭೇಷರತ್ ಕ್ಷಮೆಗೆ ಪಟ್ಟು ಹಿಡಿದಿದ್ದರಿಂದ ಮಾನನಷ್ಟ ಮೊಕದ್ದಮೆ ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಿಂಪಡೆದಿದ್ದಾರೆ.

ನ್ಯಾಯಮೂರ್ತಿ ಎಎಸ್ ಓಕಾ ನೇತೃತ್ವದ ದ್ವಿಸದಸ್ಯ ಪೀಠ ಗುರುವಾರ ಸುದೀರ್ಘ ವಿಚಾರಣೆ ನಡೆಸಿದ್ದು, ಇಬ್ಬರು ಹಿರಿಯ ಅಧಿಕಾರಿಗಳು ಈ ರೀತಿ ಕಿತ್ತಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇಬ್ಬರೂ ರಾಜೀ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಇದಕ್ಕೆ ಡಿ. ರೂಪಾ ಒಪ್ಪಿ ಮಧ್ಯಸ್ಥಿಕೆಗೆ ಯಾರನ್ನಾದರೂ ನೇಮಕ ಮಾಡುವಂತೆ ಮನವಿ ಮಾಡಿದರು. ಆದರೆ ರೋಹಿಣಿ ಸಿಂಧೂರಿ ರಾಜೀ ಸಂಧಾನ ತಿರಸ್ಕರಿಸಿದ್ದು, ಕೋರ್ಟ್ ನಲ್ಲಿಯೇ ಪ್ರಕರಣ ಬಗೆಹರಿಯಲಿ ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ವಾಪಸ್ ಪಡೆಯಬೇಕಾದರೆ ಭೇಷರತ್ ಕ್ಷಮೆ ಕೋರಬೇಕು ಎಂದು ಪಟ್ಟಿ ಹಿಡಿದರು.

ಇದರಿಂದ ಇಬ್ಬರೂ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ನಂತರ ವಿಚಾರಣೆ ಪುನರಾರಂಭಗೊಂಡಾಗ ರೋಹಿಣಿ ಸಿಂಧೂರಿ ಭೇಷರತ್ ಕ್ಷಮೆ ಯಾಚಿಸಲು ಕೇಳುತ್ತಿದ್ದಾರೆ. ರಾಜೀಗೆ ಒಪ್ಪುತ್ತಿಲ್ಲ ಎಂದು ಡಿ ರೂಪಾ ಹೇಳಿದರು.

ನ್ಯಾಯಮೂರ್ತಿಗಳು ಇಬ್ಬರು ಕೋರ್ಟ್‌ನಲ್ಲಿದ್ದೀರಿ ಪರಸ್ಪರ ಮಾತನಾಡಿಕೊಳ್ಳಬಹುದೇ ಅಥವಾ ಹಿರಿಯ ವಕೀಲರು ಅಥವಾ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ರಾಜೀ ಸಂಧಾನ ಮಾಡಬಹುದೇ ಎಂದು ಪ್ರಸ್ತಾಪ ಮಾಡಿತು. ಕೆಲ ಕಾಲ ಮಾತುಕತೆಗೂ ಅವಕಾಶ ನೀಡಿ ವಿಚಾರಣೆ ಮುಂದೂಡಿತು.

ಇದಕ್ಕೆ ಉತ್ತರಿಸಿದ ರೋಹಿಣಿ ಸಿಂಧೂರಿ, ಡಿ.ರೂಪಾ ನನ್ನ ಮೇಲೆ ಮಾಡಿದ ಆರೋಪಗಳು ಇನ್ನೂ ಸಾಮಾಜಿಕ ಜಾಲತಾಣದಲ್ಲಿದೆ. ಕೋರ್ಟ್ ಆದೇಶದ ಬಳಿಕವೂ ರೂಪಾ ಡಿಲೀಟ್ ಮಾಡಿಲ್ಲ ಎಂದು ವಾದಿಸಿದರು. ಇಬ್ಬರು ಹಿರಿಯ ಅಧಿಕಾರಿಗಳು ಹೀಗೆ ವರ್ತಿಸಬಾರದು. ಮಾತುಕತೆಗೆ ಒಪ್ಪದಿದ್ದರೆ ನಾವು ಏನು ಮಾಡಬಹುದು. ಅರ್ಹತೆ ಮೇಲೆ ವಿಚಾರಣೆ ನಡೆಸಬಹುದು ಎಂದು ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು.

ಒಳ್ಳೆಯದೇ ಅಲ್ಲವೇ? ಕ್ಷಮೆ ಕೇಳಿ ಪ್ರಕರಣ ಬಗೆಹರಿಸಿಕೊಳ್ಳಿ. ಇಲ್ಲದೇ ಕಾನೂನು ಪ್ರಕಾರ ಹೋದರೆ ಇಬ್ಬರೂ ಕಷ್ಟವಾಗುತ್ತದೆ. ಅಲ್ಲದೇ ಈ ಪ್ರಕರಣವನ್ನು ವಿಚರಣಾಧೀನ ಕೋರ್ಟ್ ನಲ್ಲಿಯೇ ಬಗೆಹರಿಸಿಕೊಳ್ಳಲು ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನ್ಯಾಯಮೂರ್ತಿಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ಡಿ ರೂಪಾ ಅರ್ಜಿ ವಾಪಸ್ ಪಡೆದಿದ್ದಾರೆ.

ಕೆಲ ಹೊತ್ತಿನ ಬಳಿಕ ಡಿ.ರೂಪಾ ಮಾತುಕತೆ ವಿಫಲವಾಯಿತು ಎಂದರು. ಇದಕ್ಕೆ ಕಾರಣ ಏನು ಎಂದು ನ್ಯಾಯಧೀಶರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೂಪಾ ನಾನು ಬೇಷರತ್‌ದ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದರು.

ನನ್ನ ವಿರುದ್ಧ ಡಿ.ರೂಪಾ ಮೌದ್ಗಿಲ್ 2023ರ ಫೆ.18 ಮತ್ತು 19ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಲಾಗಿದೆ. ಇದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮಾನಸಿಕ ಯಾತನೆ ಉಂಟು ಮಾಡಿದೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾ.3ರಂದು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments