ವಿಕಿರಣ ನಿಗ್ರಹಿಸುವ ರುದ್ರಂ-2 ಸೂಪರ್ ಸಾನಿಕ್ ಕ್ಷಿಪಣಿಯನ್ನು ಭಾರತ ಆಕಾಶದಲ್ಲಿ ಯುದ್ಧ ವಿಮಾನ ಸುಖೋಯ್ 30ಎಂಕೆಐ ಮೂಲಕ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್ ಡಿಒ) ಅಭಿವೃದ್ಧಿಪಡಿಸಿದ ವಿಕಿರಣ ನಿಗ್ರಹ ಕ್ಷಿಪಣಿ ಆಗಿರುವ ರುದ್ರಂ ಸೂಪರ್ ಸಾನಿಕ್ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ.
ಭಾರತದ ವಾಯುಪಡೆಯ ಬೆನ್ನೆಲುಬಾದ ಸುಖೋಯ್ 30 ಎಂಕೆಐನಲ್ಲಿ ನಾಲ್ಕು ವರ್ಷಗಳ ಹಿಂದೆ ಮೊದಲ ಆವೃತ್ತಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ಅಭಿವೃದ್ಧಿಪಡಿಸಿದ 2ನೇ ಆವೃತ್ತಿಯನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದೆ.
ರುದ್ರಂ-2 ಕ್ಷಿಪಣಿಯನ್ನು ಪ್ರೊಫೆಲರ್, ನಿಖರ ಗುರಿ, ನೇವಿಗೇಷನ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಯಶಸ್ವಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.