ಹೆಡ್ಡಿಂಗ್ ದಾದಾ ಎಂದೇ ಪತ್ರಿಕೋದ್ಯಮದಲ್ಲಿ ಹೆಸರಾಗಿದ್ದ ಹಿರಿಯ ಪತ್ರಕರ್ತ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕರಾದ ವಸಂತ ನಾಡಿಗೇರ್ ವಿಧಿವಶರಾಗಿದ್ದಾರೆ.
ಭಾನುವಾರ ರಾತ್ರಿ ಕೆಲಸಚಮುಹಿಸಿ ಮನೆಗೆ ತೆರಳಿದ ವೇಳೆ ಹೃದಯಘಾತದಿಂದ ಮೃತಪಟ್ಡಿದ್ದು, ಸೋಮವಾರ ಸಂಜೆ ಚಾಮರಾಜಪೇಟೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿದ್ದ ವಸಂತ ನಾಡಿಕೇರ್, ಈ ಹಿಂದೆ ವಿಜಯ ಕರ್ನಾಟಕ, ವಿಶ್ವವಾಣಿ, ಕನ್ನಡಪ್ರಭ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.
ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನ ಬರುತ್ತಿದ್ದ ವಿಶೇಷ ತಲೆಬರಹ (ಹೆಡ್ಡಿಂಗ್) ಕೊಡುವ ಮುಲಕ ಪತ್ರಿಕೋದ್ಯಮದಲ್ಲಿ ಹೊಸ ರೀತಿಯ ಕ್ರಿಯೇಟಿವ್ ಹೆಡ್ಡಿಂಗ್ ಯುಗಕ್ಕೆ ಚಾಲನೆ ನೀಡಿದವರು ವಸಂತ್ ನಾಡಿಗೇರ್.
ನಾಡಿಗೇರ್ ನಿಧನಕ್ಕೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.