ಸೆಬಿ ಅಧ್ಯಕ್ಷ ಸ್ಥಾನ ಅಲಂಕರಿಸಿದಾಗಿನಿಂತ ಮದ್ಹಾರಿ ಪುರಿ ಬಚ್ ನಿಗದಿಗಿಂತ ಹೆಚ್ಚು ಮೊತ್ತದ ವೇತನವನ್ನು ಐಸಿಐಸಿಐ ಬ್ಯಾಂಕ್ ನಿಂದ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಉದ್ದಿಮೆಗಳ ನಿಯಂತ್ರಣ ಸಂಸ್ಥೆ ಅಧ್ಯಕ್ಷೆಯಾಗಿರುವ ಮಹ್ದಾರಿ ಪುರಿ ಬಚ್ ಗೆ ಸೆಬಿ ಅಧ್ಯಕ್ಷರಿಗೆ ನಿಗದಿಯಾಗಿರುವ ವೇತನದ ಪ್ರಕಾರದ 2017ರಿಂದ ಇಲ್ಲಿಯವರೆಗೆ 3.3 ಕೋಟಿ ರೂ. ಒಟ್ಟು ವೇತನ ಪಡೆಯಬೇಕಿತ್ತು. ಆದರೆ ಐಸಿಐಸಿಐ ಬ್ಯಾಂಕ್ ನಿಂದ ಇಲ್ಲಿಯವರೆಗೆ 16.8 ಕೋಟಿ ರೂ. ಗಳಿಸಿದ್ದಾರೆ. ಇದು ಅವರ ನಿಗದಿತ ವೇತನಕ್ಕಿಂತ 5.09 ಪಟ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸೆಬಿ ಅಧ್ಯಕ್ಷರ ಮೇಲೆ ಸತತವಾಗಿ ಗಂಭೀರ ಆರೋಪ ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಅದಾನಿ ಕಂಪನಿಯ ಷೇರುಗಳನ್ನು ಸಿಂಗಾಪುರದಲ್ಲಿ ಪಡೆದು 10 ಸಾವಿರ ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದ್ದಾರೆ ಎಂದು ಹಿಂಡೆನ್ ಬರ್ಗ್ ಗಂಭೀರ ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡಿತ್ತು.
ಇದೀಗ ಕಾಂಗ್ರೆಸ್ ಸೆಬಿ ಅಧ್ಯಕ್ಷರಾದ ಮೇಲೆ ಮದ್ಹಾರಿ ಪುರಿ ಬಚ್ ನಿಗದಿತ ವೇತನಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ನಿಂದ ವೇತನವಾಗಿ ಪಡೆದಿದ್ದಾರೆ. ಇದರರ್ಥ ಅವರು ಐಸಿಐಸಿಐ ಬ್ಯಾಂಕ್ ಗೆ ಕೂಡ ಅಕ್ರಮ ವಹಿವಾಟಿಗೆ ನೆರವಾಗಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಪ್ರವೇಶಿಸಿ ಸೆಬಿ ಅಧ್ಯಕ್ಷರ ಅಕ್ರಮಗಳ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದೆ.