ಬಹು ಸಿಡಿತಲೆಯ ಅಗ್ನಿ-5 ಕ್ಷಿಪಣಿ ಪರೀಕ್ಷೆ `ಮಿಷನ್ ದಿವ್ಯಾಸ್ತ್ರ’ ಯಶಸ್ಸಿನ ಹಿಂದೆ ಮಹಿಳಾ ವಿಜ್ಞಾನಿ ಶೀನಾ ರಾಣಿ ಮಹತ್ವದ ಪಾತ್ರ ವಹಿಸಿ ಸ್ಫೂರ್ತಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಿಷನ್ ದಿವ್ಯಾಸ್ತ್ರ ಎಂದು ಕರೆದ ಅಗ್ನಿ-5 ಕ್ಷಿಪಣಿಯನ್ನು ವಾಯು ಮೂಲಕ ಚಿಮ್ಮಿಸಿ ಗುರಿ ತಲುಪಿಸುವ ಮಹತ್ವದ ಪರೀಕ್ಷೆ ಯಶಸ್ವಿಯಾಗಿತ್ತು. ಅಗ್ನಿ 5 5200ರಿಂದ 5500 ಕಿ.ಮೀ. ದೂರ ನಿಖರ ಗುರಿ ತಲುಪಿತ್ತು.
ಅಗ್ನಿ-5 ಕ್ಷಿಪಣಿ ಯೋಜನೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಮುಖಸ್ಥೆ ಶೀನಾ ರಾಣಿ ಮುನ್ನಡೆಸಿದ್ದಾರೆ. 1999ರಿಂದ ಅಗ್ನಿ-5 ಕ್ಷಿಪಣಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಶೀನಾ ರಾಣಿ ಈ ಬಾರಿ ತಾವೇ ನೇತೃತ್ವ ವಹಿಸಿದ್ದರು.
ಅಗ್ನಿ-5 ಕ್ಷಿಪಣಿ ಹಲವು ಸಿಡಿತಲೆಗಳನ್ನು ಹೊಂದಿದ್ದು, ಸ್ವಯಂ ಆಗಿ ಶಸ್ತ್ರಾಸ್ತ್ರ ಲೋಡ್ ಮಾಡಿಕೊಳ್ಳುತ್ತದೆ. ಅಲ್ಲದೇ ಅಣು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಏಕಕಾಲದಲ್ಲಿ ಹಲವು ಗುರಿಗಳನ್ನು ಏಕಕಾಲದಲ್ಲಿ ತಲುಪುತ್ತದೆ.
ಅಗ್ನಿ ಸರಣಿ ಕ್ಷಿಪಣಿ ತಯಾರಿಕೆ ಹಾಗೂ ಅಭಿವೃದ್ಧಿಯಲ್ಲಿ 25 ವರ್ಷಗಳ ಅನುಭವ ಹೊಂದಿರುವ 57 ವರ್ಷದ ಶೀನಾ ರಾಣಿ, ಡಿಆರ್ ಡಿಒ ವಿಭಾಗದ ಅಡ್ವಾನ್ಸ್ ಸಿಸ್ಟಮ್ ಲ್ಯಾಬೊರೆಟರಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಪದವಿ ಪಡೆದಿದ್ದು ಶೀನಾ ರಾಣಿ, ಭಾರತದ ನಾಗರಿಕ ರಾಕೆಟ್ ಲ್ಯಾಬ್ ನಲ್ಲಿ ವಿಕ್ರಂ ಸರಾಭಾಯಿ ಸ್ಪೇಸ್ ಸೆಂಟರ್ ಉಸ್ತುವಾರಿಯನ್ನು ಹೊತ್ತಿದ್ದಾರೆ.