Thursday, November 21, 2024
Google search engine
HomeಅಪರಾಧSHOCKING ಹಾಸನ ಪೊಲೀಸ್ ಕಚೇರಿಯಲ್ಲೇ ಕಾನ್ಸ್ ಟೇಬಲ್ ನಿಂದ ಭೀಕರ ಕೊಲೆ!

SHOCKING ಹಾಸನ ಪೊಲೀಸ್ ಕಚೇರಿಯಲ್ಲೇ ಕಾನ್ಸ್ ಟೇಬಲ್ ನಿಂದ ಭೀಕರ ಕೊಲೆ!

ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ಸದಾ ಸುದ್ದಿಯಾಗುತ್ತಿರುವ ಹಾಸನದಲ್ಲಿ ಇದೀಗ ಪೊಲೀಸ್ ಕಚೇರಿಯಲ್ಲೇ ಭೀಕರ ಕೊಲೆ ನಡೆದಿದೆ.

ಹೌದು, ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತನ್ನ ವಿರುದ್ಧ ದೂರು ನೀಡಲು ಬಂದಿದ್ದ ಪತ್ನಿಯನ್ನು ಅದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಕೊಲೆ ಮಾಡಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೇದೆಯಾಗಿರುವ ಲೋಕನಾಥ್ ತನ್ನ ಪತ್ನಿ ಮಮತಾಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ದಂಪತಿ ನಡುವೆ ಮನೆಯಲ್ಲಿ ಪದೇಪದೆ ಜಗಳ ನಡೆಯುತ್ತಿದ್ದು, ಕೆಲವು ದಿನಗಳ ಹಿಂದೆ ಕೂಡ ಇಬ್ಬರ ನಡುವೆ ಜಗಳ ಆಗಿದ್ದು, ಗಂಡನ ವಿರುದ್ಧ ದೂರು ನೀಡಲು ಪತ್ನಿ ಮಮತಾ ಪೊಲೀಸ್ ಸೂಪರಿಟೆಂಡೆಂಟ್ ಕಚೇರಿಗೆ ಆಗಮಿಸಿದ್ದಳು. ಇದರಿಂದ ಕೆರಳಿದ ಲೋಕನಾಥ್ ಚಾಕುವಿನಿಂದ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡ ಮಮತಾಳನ್ನು ಪೊಲೀಸರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಆಕೆ ಅತೀವ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಪೊಲೀಸರು ಲೋಕನಾಥ್ ನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments