ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ತ್ರಿವರ್ಣ ಧ್ವಜ ಹಿಡಿದು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಪಡೆಯನ್ನು ಮುನ್ನಡೆಸಿದರು.
ಶುಕ್ರವಾರ ತಡರಾತ್ರಿ ಪ್ಯಾರಿಸ್ ಸೈನಿ ನದಿಯ ಮೇಲೆ ದೋಣಿಗಳ ಮೇಲೆ ಕ್ರೀಡಾಪಟುಗಳ ಪರೇಡ್ ನಡೆಯಿತು. ವಿಶೇಷವಾದ ಪರೇಡ್ ನಲ್ಲಿ ಭಾರತದ ಕ್ರೀಡಾಪಟುಗಳು ಹರ್ಷೋದ್ಗಾರದಿಂದ ಭಾಗವಹಿಸಿ ಸಂಭ್ರಮಿಸಿದರು.
ಮಹಿಳಾ ಕ್ರೀಡಾಪುಟಗಳು ಬಿಳಿ ಸೀರೆ ಮತ್ತು ತಿಳಿ ಕೆಂಪು ಬಣ್ಣದ ಬ್ಲೌಸ್ ಧರಿಸಿದರೆ, ಪುರುಷ ಕ್ರೀಡಾಪಟುಗಳು ಬಿಳಿ ಕುರ್ತಾ ಮತ್ತು ತಿಳಿ ಕೆಂಪು ಬಣ್ಣದ ಪ್ಯಾಂಟ್ ಧರಿಸಿ ಗಮನ ಸೆಳೆದರು.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಈ ಬಾರಿ ಭಾರತದ 117 ಕ್ರೀಡಾಪಟುಗಳು ಪಾಲ್ಗೊಂಡಿದ್ದು, ದಾಖಲೆ ಪದಕ ಮೇಲೆ ಕಣ್ಣಿಟ್ಟಿದ್ದಾರೆ.