ಹೆಣ್ಮಕ್ಕಳು ಬೇಡ ಅಂತ ಹುಟ್ಟಿದ ಅವಳಿ ಹೆಣ್ಣುಮಕ್ಕಳನ್ನು ಕೊಂದು ಹೂತು ಹಾಕಿದ್ದ ಪಾಪಿ ತಂದೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಜೂನ್ 6ರಂದು ಆಗತಾನೇ ಹುಟ್ಟಿದ ಅವಳಿ ಹೆಣ್ಣು ಮಕ್ಕಳನ್ನು ಕೊಂದು ತಂದೆ ನೀರಜ್ ಸೋಲಂಕಿ ಪರಾರಿಯಾಗಿದ್ದ. ಆತನನ್ನು ಪೊಲೀಸರು ಹರಿಯಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೂಜಾ ಸೋಲಂಕಿ ಪತಿ ನೀರಜ್ ಸೋಲಂಕಿ ಜೊತೆ ದೆಹಲಿಯ ಸುಲ್ತಾನ್ ಪುರಿಯಲ್ಲಿ ವಾಸಿಸುತ್ತಿದ್ದರು. ಹರಿಯಾಣದ ರೋಹ್ಟಕ್ ಆಸ್ಪತ್ರೆಯಲ್ಲಿ ಮೇ 30ರಂದು ಅವಳಿ ಹೆಣ್ಣು ಮಕ್ಕಳಿಗೆ ಪೂಜಾ ಜನ್ಮ ನೀಡಿದ್ದರು.
ಪತಿ ವಿರುದ್ಧ ಪತ್ನಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನೀರಜ್ ಸೋಲಂಕಿ ಪದೇಪದೆ ದೆಹಲಿ ಮತ್ತು ಹರಿಯಾಣ ನಡುವೆ ಸ್ಥಳ ಬದಲಾಯಿಸುತ್ತಿದ್ದರಿಂದ ಪೊಲೀಸರಿಗೆ ಟ್ರ್ಯಾಕ್ ಮಾಡುವುದು ಕಷ್ಟವಾಗಿತ್ತು. ಅಂತಿಮವಾಗಿ ಹರಿಯಾಣದಲ್ಲಿ ಬಂಧನಕ್ಕೊಳಗಾಗಿದ್ದಾನೆ.
3 ದಿನದ ಹಿಂದೆಯಷ್ಟೇ ಜನಿಸಿದ ಅವಳಿ ಹೆಣ್ಣು ಮಕ್ಕಳನ್ನು ನೀರಜ್ ಕೊಲೆ ಮಾಡಿದ್ದಾನೆ ಎಂದು ದೂರವಾಣಿಯಲ್ಲಿ ಬದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆ ನೀರಜ್ ಸಮಾಧಿಯಲ್ಲಿ ಅಗ್ನಿ ಸ್ಪರ್ಶ ನೀಡಿ ಅವಳಿ ಮಕ್ಕಳನ್ನು ಕೊಂದಿರುವುದು ದಾಖಲೆಗಳಿಂದ ದೃಢಪಟ್ಟಿತ್ತು.