ಘಮದಿಂದಲೇ ಆಕರ್ಷಿಸುವ ಏಲಕ್ಕಿಯನ್ನು ಮಸಾಲೆ ಪದಾರ್ಥವಾಗಿ ಪರಿಗಣಿಸಲಾಗಿದೆ. ಆದರೆ ಸಿಹಿಯನ್ನು ಇನ್ನಷ್ಟು ಪ್ರಿಯಗೊಳಿಸುವ ಗುಣವೂಇದರಲ್ಲಿದೆ. ಅದೇ ರೀತಿ ಚಹಾಕ್ಕೆ ನೀವು ಏಲಕ್ಕಿ ಸೇರಿಸಿ ಕುಡಿಯುವ ಅಭ್ಯಾಸ ಮಾಡಿದರೆ ಹತ್ತು ಹಲವು ಆರೋಗ್ಯ ಲಾಭಗಳನ್ನು ಪಡೆಯಬಹುದು.
ಏಲಕ್ಕಿ ಟೀಯನ್ನು ಪ್ರತಿದಿನ ಕುಡಿಯುವವರಿಗೆ ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ. ಅಸಿಡಿಟಿ ಸಮಸ್ಯೆ ಇದ್ದವರಿಗೂ ಏಲಕ್ಕಿ ಚಹಾಸೇವನೆ ಉತ್ತಮ. ವಾಯು ಸಮಸ್ಯೆಯನ್ನೂ ಈ ಚಹಾ ನಿವಾರಿಸುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವನ್ನು ಕೂಡ ಹೊಂದಿದೆ. ಈ ಚಹಾ ಹೃದಯಕ್ಕೂ ಒಳ್ಳೆಯದು. ಪ್ರತಿದಿನ ಏಲಕ್ಕಿ ಚಹಾ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಮಧುಮೇಹಿಗಳು ಕೂಡ ಸಕ್ಕರೆ ರಹಿತ ಏಲಕ್ಕಿ ಚಹಾ ಕುಡಿಯುವ ಅಬ್ಯಾಸ ಹೊಂದಿದ್ದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚುವುದು. ಏಲಕ್ಕಿ ಚಹಾವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಶೀತದ ಸಮಸ್ಯೆ ಕಡಿಮೆಯಾಗುವುದು. ಏಲಕ್ಕಿಯಲ್ಲಿರುವ ಅಂಶಗಳು ಉಸಿರಾಟ ಸಮಸ್ಯೆ ತೊಂದರೆಯನ್ನು ನಿವಾರಿಸುತ್ತದೆ .ಅಧಿಕ ಕೊಬ್ಬು ಕರಗಿಸಬೇಕಾದರೆ ಏಲಕ್ಕಿ ಚಹಾ ಸಹಕಾರಿ. ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆಯನ್ನು ತಡೆಯಲು ಏಲಕ್ಕಿ ಸಹಾಯ ಮಾಡುತ್ತದೆ. ಒತ್ತಡವನ್ನು ಸಹ ಕಡಿಮೆ ಮನಸ್ಸನ್ನು ಹಗುರಾಗಿಸುತ್ತದೆ.