ರಾಜದಂಡ ಸೆಂಗೋಲ್ ಅನ್ನು ತೆರವುಗೊಳಿಸಿ ಆ ಜಾಗದಲ್ಲಿ ಸಂವಿಧಾನವನ್ನು ಇರಿಸಬೇಕು ಎಂದು ಸಮಾಜವಾದಿ ಪಕ್ಷದ ಸಂಸದ ಆರ್.ಕೆ. ಚೌಧರಿ ಲೋಕಸಭೆಯಲ್ಲಿ ಒತ್ತಾಯಿಸಿದರು. ಇದರಿಂದ ಕೆರಳಿದ ಬಿಜೆಪಿ ನೇತೃತ್ವದ ಎನ್ ಡಿಎ ಸದಸ್ಯರು ಲೋಕಸಭೆಯಲ್ಲಿ ಗದ್ಧಲ ಸೃಷ್ಟಿಸಿದರು.
ಸಮಾಜವಾದಿ ಪಕ್ಷದ ಸಂಸದ ಆರ್‌ಕೆ ಚೌಧರಿ ಅವರು ಲೋಕಸಭೆಯಲ್ಲಿ ಐತಿಹಾಸಿಕ ರಾಜದಂಡವಾದ ಸೆಂಗೋಲ್ ಅನ್ನು ಸಂವಿಧಾನದೊಂದಿಗೆ ಬದಲಾಯಿಸಬೇಕು ಎಂದು ಒತ್ತಾಯಿಸಿದ ನಂತರ ಗದ್ದಲ ಎಬ್ಬಿಸಿದರು, ಬಿಜೆಪಿ ಮತ್ತು ಇತರ ಎನ್‌ಡಿಎ ಮಿತ್ರಪಕ್ಷಗಳಿಂದ ಹಿನ್ನಡೆಗೆ ಆಹ್ವಾನ ನೀಡಿದರು.
ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್‌ಗೆ ಬರೆದ ಪತ್ರದಲ್ಲಿ, ಆರ್‌ಕೆ ಚೌಧರಿ ಸೆಂಗೋಲ್ ಅನ್ನು ಪ್ರಜಾಪ್ರಭುತ್ವ ಭಾರತದಲ್ಲಿ “ರಾಜಪ್ರಭುತ್ವದ ಸಂಕೇತ” ಎಂದು ಕರೆದಿದ್ದಾರೆ.
ಗುರುವಾರ ಲೋಕಸಭೆ ಅಧಿವೇಶದನಲ್ಲಿ ರಾಜದಂಡ ಬದಲಿಸಿ ಸಂವಿಧಾನ ಇರಿಸುವ ಪ್ರಸ್ತಾಪ ಮುಂದಿಟ್ಟರು. ಅಲ್ಲದೇ ಸೆಂಗೊಲ್ ಎಂದರೆ ‘ರಾಜ್ ದಂಡ’. ಇದರ ಅರ್ಥ ‘ರಾಜರ ದಂಡ’ ಎಂಬುದಾಗಿದೆ.
ರಾಜಪ್ರಭುತ್ವವನ್ನು ಕೊನೆಗೊಳಿಸಿದ ನಂತರ ದೇಶ ಸ್ವತಂತ್ರವಾಯಿಗಿದೆ. ದೇಶವನ್ನು ‘ರಾಜಾ ಕಾ ದಂಡ’ ನಡೆಸುತ್ತದೆಯೇ ಅಥವಾ ಸಂವಿಧಾನ ನಡೆಸುತ್ತಿದೆಯೇ? ಸಂವಿಧಾನ ಹಾಗೂ ಸಂವಿಧಾನದ ಆಶಯ ಉಳಿಸಬೇಕಾದರೆ ಸೆಂಗೋಲ್ ಅನ್ನು ಸಂಸತ್ತಿನಿಂದ ತೆಗೆದುಹಾಕಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದರು.
ನೂತನ ಸಂಸತ್ ಭವನ ಕಟ್ಟಡದ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸೆಂಗೋಲ್ (ರಾಜದಂಡ) ಪ್ರತಿಷ್ಠಾಪಿಸಿದರು. ಇದು ಬ್ರಿಟಿಷರು ಸ್ವಾತಂತ್ರ್ಯದ ವೇಳೆ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು ಅವರಿಗೆ ಹಸ್ತಾಂತರಿಸಿದ್ದರು. ನೆಹರು ರಾಜದಂಡ ಸ್ವೀಕರಿಸಿದರೂ ಅದನ್ನು ಸಂಸತ್ ನಲ್ಲಿ ಪ್ರತಿಷ್ಠಾಪಿಸಿರಲಿಲ್ಲ.
ರಾಜದಂಡ ತಮಿಳುನಾಡಿನ ರಾಜಪರಂಪರೆಯ ಸಂಸ್ಕೃತಿಯಾಗಿದ್ದು, ಇದು ಭಾರತದ ಸಂಸ್ಕೃತಿ ಹೇಗಾಗುತ್ತದೆ. ಅದನ್ನು ಇಲ್ಲಿಗೆ ತಂದು ಪ್ರತಿಷ್ಠಾಪಿಸುವ ಅಗತ್ಯ ಏನಿದೆ ಎಂದು ಪ್ರತಿಪಕ್ಷ ಸದಸ್ಯರು ವಾದಿಸಿದರು. ಆಗ ನೆಹರು ಅವರು ರಾಜದಂಡ ಪ್ರತಿಷ್ಠಾಪಿಸಲು ಇಚ್ಚಿಸಲಿಲ್ಲ ಎಂದ ಮೇಲೆ ಸ್ವೀಕರಿಸಿದ್ದು ಯಾಕೆ? ಎಂದು ಪ್ರಶ್ನಿಸಿದರು.