ಸೋಲರಿಯದ ತಂಡವಾಗಿ ಮುನ್ನುಗ್ಗುತ್ತಿರುವ ಬಲಿಷ್ಠ ಸ್ಪೇನ್ ತಂಡ 2-1 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಬಗ್ಗುಬಡಿದು ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ.
ಮಂಗಳವಾರ ತಡರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಮೊದಲು ಗೋಲು ಗಳಿಸಿ ಮುನ್ನಡೆ ಸಾಧಿಸಿತಾದರೂ ನಂತರ ಸತತ 2 ಗೋಲು ಗಳಿಸುವ ಮೂಲಕ ಸ್ಪೇನ್ ಫೈನಲ್ ಪ್ರವೇಶಿಸಿತು. ಈ ಮೂಲಕ ಯುರೋ ಕಪ್ ಇತಿಹಾಸದಲ್ಲೇ ಸತ 6 ಗೆಲುವಿನೊಂದಿಗೆ ಸೋಲರಿಯದ ತಂಡವಾಗಿ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಯಿತು.
ಫ್ರಾನ್ಸ್ ಪರ ಕುಲೊ ಮುನಾನಿ (9ನೇ ನಿಮಿಷ) ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಆದರೆ ಫ್ರಾನ್ಸ್ ಪರ ಡ್ಯಾನಿ ಒಲ್ಮೊ (21ನೇ ನಿಮಿಷ) ಮತ್ತು ಲೆಮಿನಿ ಯಮಲ್ (25ನೇ ನಿಮಿಷ) 5 ನಿಮಿಷಗಳ ಅಂತರದಲ್ಲಿ ತಲಾ ಒಂದು ಗೋಲು ಬಾರಿಸಿ ಗೆಲುವಿನ ರೂವಾರಿಗಳಾದರು.
ಫ್ರಾನ್ಸ್ ತಂಡದ ನಾಯಕ ಹಾಗೂ ಸ್ಟಾರ್ ಆಟಗಾರ ಕೈಲಿ ಮಬೆಪೆ ಫಾರ್ಮ್ ಕೊರತೆ ತಂಡಕ್ಕೆ ದುಬಾರಿ ಆಯಿತು. ಅಲ್ಲದೇ ಅವರು ಯಾವುದೇ ಗೋಲು ಗಳಿಸದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.